Saturday, 20 February 2021

ಪೆಟ್ರೋಲ್ ಬೆಲೆ ಏರಿಕೆ: ಬಿಜೆಪಿ ಮುಖಂಡರ, ಬಾಲಿವುಡ್ ತಾರೆಗಳ ಹಳೆ ಟ್ವೀಟ್‌ಗಳು ವೈರಲ್


 ಪೆಟ್ರೋಲ್ ಬೆಲೆ ಏರಿಕೆ: ಬಿಜೆಪಿ ಮುಖಂಡರ, ಬಾಲಿವುಡ್ ತಾರೆಗಳ ಹಳೆ ಟ್ವೀಟ್‌ಗಳು ವೈರಲ್

ಹೊಸದಿಲ್ಲಿ, ಫೆ.21: ದೇಶದಲ್ಲಿ ಪೆಟ್ರೋಲ್ ದರ 100 ರೂಪಾಯಿಯ ಗಡಿ ದಾಟುತ್ತಿದ್ದಂತೆಯೇ ಟ್ವಿಟರ್ ಬಳಕೆದಾರರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು, ಬಾಲಿವುಡ್ ತಾರೆಗಳು ಮಾಡಿದ ಹಳೆ ಟ್ವೀಟ್‌ಗಳು ವೈರಲ್ ಆಗಿವೆ. ಯುಪಿಎ ಆಡಳಿತದ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾದ ಸಂದರ್ಭದಲ್ಲಿ ತಾವೇ ಮಾಡಿದ ಟ್ವೀಟ್‌ಗಳು ಇದೀಗ ಬಿಜೆಪಿ ಮುಖಂಡರನ್ನು ಅಣಕಿಸುತ್ತಿವೆ. ಇದೀಗ ಬಿಜೆಪಿ ಅಧಿಕಾರದಲ್ಲಿರುವಾಗಲೇ ಪೆಟ್ರೋಲ್ ದರ ಮೊದಲ ಬಾರಿಗೆ ಶತಕದ ಗಡಿ ದಾಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಳೆ ಟ್ವೀಟ್‌ಗಳನ್ನು ಗಮನಿಸಿ: 

ನರೇಂದ್ರ ಮೋದಿ: ಪೆಟ್ರೋಲ್ ಬೆಲೆಯಲ್ಲಿ ಗಣನೀಯ ಏರಿಕೆಯು ಯುಪಿಎ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಇದು  ಗುಜರಾತ್‌ನ ಲಕ್ಷಾಂತರ ಮಂದಿಗೆ ಹೊರೆಯಾಗುತ್ತಿದೆ.

ಅಮಿತಾಬ್ ಬಚ್ಚನ್: ಟಿ-753 ಪೆಟ್ರೋಲ್ ಬೆಲೆ 7.5 ರೂಪಾಯಿ ಹೆಚ್ಚಳ. ಪಂಪ್ ಸಹಾಯಕ- ಎಷ್ಟು ಪೆಟ್ರೋಲ್ ಹಾಕಲಿ? ಕಾರಿನ ಮಾಲೀಕ- 2-4 ರೂಪಾಯಿಯ ಪೆಟ್ರೋಲ್ ಸಿಂಪಡಿಸಿ. ಕಾರು ಸುಟ್ಟುಹಾಕಲು ಬಯಸಿದ್ದೇನೆ!

ಬಿಜೆಪಿ ಮುಖಂಡ ಸಂಬಿತ್ ಪಾತ್ರಾ: ಚಿದಂಬರಂ ಜಿಡಿಪಿ ಮತ್ತಷ್ಟು ಬೆಳೆಯಬೇಕು ಎಂದು ಒತ್ತಿ ಹೇಳಿದ್ದಾರೆ. ಆದರೆ ಜಿಡಿಪಿ ಅಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್

ಸ್ಮೃತಿ ಇರಾನಿ: ಪೆಟ್ರೋಲ್ ದರ ಮತ್ತೆ ಹೆಚ್ಚಿದೆ. ಆಮ್ ಆದ್ಮಿಯ ಯುಪಿಎ ಸರ್ಕಾರ ಇದೀಗ ಕೇವಲ ವಿಶೇಷ ಟೆಲ್ ಕಂಪನಿಗಳಿಗಾಗಿ ಕೆಲಸ ಮಾಡುತ್ತಿದೆ!

ಅಕ್ಷಯ್ ಕುಮಾರ್: ರಾತ್ರಿ ನನ್ನ ಮನೆಗೆ ಹೋಗಲೂ ಆಗುತ್ತಿಲ್ಲ; ಏಕೆಂದರೆ ಮತ್ತೆ ಪೆಟ್ರೋಲ್ ದರ ಏರುವ ಮುನ್ನ ಪೆಟ್ರೋಲ್ ಹಾಕಿಸಿಕೊಳ್ಳಲು ಮುಂಬೈಗರು ಸರದಿಯಲ್ಲಿ ನಿಂತಿದ್ದಾರೆ.

ಅಕ್ಷಯ್ ಕುಮಾರ್ ಇನ್ನೊಂದು ಟ್ವೀಟ್: ಇದೀಗ ನಿಮ್ಮ ಬೈಸಿಕಲ್‌ಗಳನ್ನು ಸ್ವಚ್ಛಗೊಳಿಸಿ ರಸ್ತೆಗೆ ಇಳಿಸುವ ಸಮಯ. ಮತ್ತೊಮ್ಮೆ ಪೆಟ್ರೋಲ್ ಬೆಲೆ ಏರಿಕೆ ನಿರೀಕ್ಷೆ.

ಸಲ್ಮಾನ್ ಖಾನ್: ಪೆಟ್ರೋಲ್ ಬಗ್ಗೆ ಭೀತಿ ಬೇಡ. ನಿಮಗೆ ಗೋಬರ್ ಚಿತ್ರ ಕಳುಹಿಸುತ್ತೇನೆ. ಇದರ ಮೂಲಕ ನೀವು ಅನಿಲ ಉತ್ಪಾದಿಸಬಹುದು

ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ: ಪೆಟ್ರೋಲ್ ಬೆಲೆ ತಿಂಗಳಲ್ಲಿ ಮೂರನೇ ಬಾರಿ ಏರಿದೆ. ಜನಸಾಮಾನ್ಯರ ಮೇಲೆ ಮತ್ತೊಂದು ಹೊರೆ

ಬಾಲಿವುಡ್ ನಟ ವಿವೇಕ್ ರಂಜನ್ ಅಗ್ನಿಹೋತ್ರಿ: ನಿಮ್ಮ ಸಂತಸ ಪೆಟ್ರೋಲ್ ಬೆಲೆಯಂತೆ ಹೆಚ್ಚಲಿ. ನಿಮ್ಮ ದುಃಖ ಭಾರತೀಯ ರೂಪಾಯಿಯಂತೆ ಕುಸಿಯಲಿ. ನಿಮ್ಮ ಹೃದಯ ಭಾರತದ ಭ್ರಷ್ಟಾಚಾರದಂತೆ ಭರ್ತಿಯಾಗಲಿ!


SHARE THIS

Author:

0 التعليقات: