Monday, 1 February 2021

ಆತ್ಮ ಬರ್ಬರ ಬಜೆಟ್ ನೀಡಿದ್ದಾರೆ - ಕೇಂದ್ರ ಬಜೆಟ್ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ

 

ಆತ್ಮ ಬರ್ಬರ ಬಜೆಟ್ ನೀಡಿದ್ದಾರೆ - ಕೇಂದ್ರ ಬಜೆಟ್ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಆತ್ಮನಿರ್ಬರ ಅಲ್ಲ, ಆತ್ಮ ಬರ್ಬರ ಬಜೆಟ್ ಆಗಿದೆ ಎಂದು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ನಿನ್ನೆಯೇ ಹೇಳಿದ್ದೆ. ನಿನ್ನೆ ನಾನು ಹೇಳಿದ್ದು ಸತ್ಯವಾಗಿದೆ. ಆತ್ಮ ನಿರ್ಬರ ಭಾರತ ಬದಲು ಆತ್ಮ ಬರ್ಬಾದ್ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಸರ್ಕಾರದಿಂದ ದಿವಾಳಿ ಬಜೆಟ್ ಮಂಡನೆಯಾಗಿದೆ ಎಂದರು.

ಕೋವಿಡ್ ನಿಂದಾಗಿ ಹಲವು ಕೈಗಾರಿಕೆಗಳು ಮುಚ್ಚಿ ಹೋಗಿದ್ದವು. ಈ ಕೈಗಾರಿಕೆಗಳನ್ನು ಪುನರಾರಂಭಿಸುವ ಬಗ್ಗೆ ಒತ್ತು ನೀಡಿಲ್ಲ. ಇನ್ನು ಕೃಷಿ ಸೆಸ್ ವಿಧಿಸಿದ್ದಾರೆ. ಶೇಕಡಾ ಎರಡುವರೆಯಿಂದ 100ವರೆಗೆ ಸೆಸ್ ವಿಧಿಸಿದ್ದಾರೆ. ಬೆಳೆ, ಯಂತ್ರೋಪಕರಣಗಳ ಮೇಲೆ ಕೃಷಿ ಸೆಸ್ ಹಾಕಲಾಗಿದೆ.

ಅದರ ಬದಲು ರೈತರಿಗೆ ಬಡ್ಡಿಯಿಲ್ಲದೇ ಸಾಲ ನೀಡಬಹುದಿತ್ತು. ಕೆಂದ್ರ ಸರ್ಕಾರ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ರೈತರ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಇದು ಯಾವ ರೀತಿ ಅರ್ಥವ್ಯವಸ್ಥೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.


SHARE THIS

Author:

0 التعليقات: