Saturday, 20 February 2021

ಮದುವೆ ಹೆಸರಲ್ಲಿ ಲವ್‌ ಜಿಹಾದ್‌ ಹೇಗೆ ನಡೀತಿದೆ ಎನ್ನೋದನ್ನು ನಾನು ಕಂಡಿದ್ದೇನೆ- ಮೆಟ್ರೋಮ್ಯಾನ್‌

 

ಮದುವೆ ಹೆಸರಲ್ಲಿ ಲವ್‌ ಜಿಹಾದ್‌ ಹೇಗೆ ನಡೀತಿದೆ ಎನ್ನೋದನ್ನು ನಾನು ಕಂಡಿದ್ದೇನೆ- ಮೆಟ್ರೋಮ್ಯಾನ್‌

ಕೊಚ್ಚಿ (ಕೇರಳ): ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಲವ್‌ ಜಿಹಾದ್ ಕಾನೂನು ಜಾರಿಗೊಳಿಸಿದ ನಂತರ ಹಿಂದೂ ಹೆಣ್ಣುಮಕ್ಕಳು ಹೇಗೆಲ್ಲಾ ಮೋಸದ ಬಲೆಗೆ ಬೀಳುತ್ತಿದ್ದಾರೆ ಎನ್ನುವ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಲವ್‌ ಜಿಹಾದ್‌ ಎನ್ನುವ ಮಹಾಮೋಸದ ಜಾಲ ಹೇಗೆ ಕೆಲಸ ಮಾಡುತ್ತಿದೆ ಎಂಬ ಕುರಿತು 'ಮೆಟ್ರೋ' ಮ್ಯಾನ್ ಎಂದೇ ಖ್ಯಾತಿಗಳಿಸಿದ ಇ ಶ್ರೀಧರನ್ ಇದೀಗ ವಿವರಣೆ ನೀಡಿದ್ದಾರೆ.

ಮದುವೆ ಎಂಬ ಜಾಲವನ್ನು ಹೆಣೆದು ಹಿಂದೂ ಹೆಣ್ಣುಮಕ್ಕಳನ್ನು ಮುಸ್ಲಿಂ ಧರ್ಮಕ್ಕೆ ಹಘೆ ಮೋಸದಿಂದ ಮತಾಂತರ ಮಾಡಲಾಗುತ್ತಿದೆ ಎನ್ನುವುದನ್ನು ತಾವು ಕಣ್ಣಾರೆ ಕಂಡಿರುವ ಬಗ್ಗೆ ಶ್ರೀಧರನ್‌ ವಿವರಣೆ ನೀಡಿದ್ದಾರೆ.

ನಿನ್ನೆ (ಶುಕ್ರವಾರ) ಬಿಜೆಪಿಗೆ ಸೇರ್ಪಡೆಯಾಗಿರುವ ಶ್ರೀಧರನ್ (88) ಅವರು, ಇಂದು ಕೇರಳದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಲವ್‌ ಜಿಹಾದ್‌ ಕುರಿತಂತೆ ಅವರಿಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅನೇಕ ಕಡೆಗಳಲ್ಲಿ ಲವ್‌ ಜಿಹಾದ್‌ ಕುರಿತು ಕೇಳಿದ್ದೇನೆ. ಆದರೆ ಹೆಚ್ಚಾಗಿ ಕೇರಳದಲ್ಲಿ ಇದು ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಸ್ವತಃ ನೋಡಿದ್ದೇನೆ. ಮದುವೆಯ ಹೆಸರಿನಲ್ಲಿ ಹೇಗೆ ಹಿಂದೂ ಯುವತಿಯರನ್ನು ವಂಚಿಸಲಾಗುತ್ತಿದೆ ಎಂದು ಬಲ್ಲೆ ಎಂದಿದ್ದಾರೆ.

ಕೇವಲ ಹಿಂದೂ ಅಷ್ಟೇ ಅಲ್ಲದೇ, ಕ್ರೈಸ್ತ ಧರ್ಮೀಯರನ್ನೂ ಮತಾಂತರ ಮಾಡುತ್ತಿರುವುದನ್ನು ನಾನು ಬಲ್ಲೆ. ಇವೆಲ್ಲವನ್ನೂ ನಾನು ಖಂಡಿಸುತ್ತೇನೆ ಎಂದು ಶ್ರೀಧರನ್‌ ಹೇಳಿದ್ದಾರೆ.

ದಲ್ಲಿನ ಲವ್ ಜಿಹಾದ್ ಕುರಿತಂತೆ ಮಾತನಾಡಿದ್ದು, ಮದುವೆ ಎಂಬ ತಂತ್ರಗಾರಿಕೆಯನ್ನು ಬಳಸಿಕೊಂದು ಹಿಂದೂ ಹೆಣ್ಣುಮಕ್ಕಳನ್ನು 'ಲವ್ ಜಿಹಾದ್' ಕೂಪಕ್ಕೆ ಒಳಪಡಿಸುತ್ತಿದ್ದಾರೆ. ಕೇರಳದ ಹಿಂದೂ ಹುಡುಗಿಯರನ್ನು ಮದುವೆ ಹೆಸರಲ್ಲಿ ಮೋಸ ಮಾಡುತ್ತಿರುವುದನ್ನು ನೋಡಿದ್ದರಿಂದ 'ಲವ್ ಜಿಹಾದ್' ಎಂಬ ಕಲ್ಪನೆಯನ್ನು ವಿರೋಧಿಸುತ್ತಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಒಂದರಲ್ಲಿ ಸುದ್ದಿಗಾರರು ಕೇಳಿದ ಲವ್ ಜಿಹಾದ್ ಕುರಿತಂತೆ ಮಾತನಾಡಿದ ಶ್ರೀಧರನ್ ಅವರು, 'ಹೌದು, ಕೇರಳದಲ್ಲಿ ಏನಾಗುತ್ತಿದೆ ಎಂಬುದನ್ನು ನಾನು ನೋಡುತ್ತಿದ್ದೇನೆ. ಮದುವೆ ಹೆಸರಿನಲ್ಲಿ ಹಿಂದೂಗಳನ್ನು ಹೇಗೆ ಮೋಸಗೊಳಿಸಲಾಗುತ್ತಿದೆ ಮತ್ತು ಅದರಿಂದ ಅವರು ಹೇಗೆ ಬಳಲುತ್ತಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಹಿಂದೂಗಳು, ಮುಸ್ಲಿಂ ಮಾತ್ರವಲ್ಲ, ಕ್ರಿಶ್ಚಿಯನ್ ಹುಡುಗಿಯರನ್ನು ಮದುವೆ ಹೆಸರಲ್ಲಿ ಮೋಸಗೊಳಿಸಲಾಗುತ್ತಿದೆ. ಈಗ ನಾನು ಖಂಡಿತವಾಗಿಯೂ ಆ ವಿಷಯವನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.

ಅಧಿಕೃತವಾಗಿ ಕೇರಳ ರಾಜಕೀಯಕ್ಕೆ ಧುಮಕಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಪಕ್ಷದ ಚಟುವಟಿಕೆಗಳಲ್ಲಿ ತಲ್ಲೀನರಾಗಿರುವ ಅವರು, ಕೇರಳದಲ್ಲಿ ಬಿಜೆಪಿ ಗೆದ್ದರೆ ತಾವು ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಇದಾಗಲೇ ಹೇಳಿಕೆ ನೀಡಿದ್ದಾರೆ.


SHARE THIS

Author:

0 التعليقات: