Thursday, 11 February 2021

ದ್ವೇಷಪೂರಿತ ಜಾಹೀರಾತುಗಳ ಪ್ರಸಾರ ಆರೋಪ: ಸುಪ್ರೀಂ ಕೋರ್ಟ್‌ʼನಿಂದ ಟ್ವಿಟರ್, ಕೇಂದ್ರ ಸರ್ಕಾರಕ್ಕೆ ನೋಟಿಸ್..!


 ದ್ವೇಷಪೂರಿತ ಜಾಹೀರಾತುಗಳ ಪ್ರಸಾರ ಆರೋಪ: ಸುಪ್ರೀಂ ಕೋರ್ಟ್‌ʼನಿಂದ ಟ್ವಿಟರ್, ಕೇಂದ್ರ ಸರ್ಕಾರಕ್ಕೆ ನೋಟಿಸ್..!

ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ಟ್ವಿಟರ್ ಮೂಲಕ ಹರಿದಾಡುವ ಸುಳ್ಳು ಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ತಡೆಯಲು ಕ್ರಮ ಕೈಗೊಬೇಕು ಎಂದು ಬಿಜೆಪಿ ಮುಖಂಡ ವಿನಿತ್ ಗೋಯೆಂಕಾ ಅವರು ಸಲ್ಲಿಸಿದ್ದ ಅರ್ಜಿ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಟ್ವಿಟರ್ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಬಿಜೆಪಿ ನಾಯಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನಕಲಿ ಸುದ್ದಿ, ಸುಳ್ಳು ಸುದ್ದಿಗಳ ಮೂಲಕ ದ್ವೇಷ ಸಂದೇಶ ಹರಡುವ ಟ್ವಿಟರ್ ವಿಷಯ ಮತ್ತು ಜಾಹೀರಾತುಗಳನ್ನು ನಕಲಿ ಖಾತೆಗಳ ಮೂಲಕ ತಡೆಯುವಂತೆ ಮನವಿ ಮಾಡಿದ್ದರು.

ಗಣ್ಯವ್ಯಕ್ತಿಗಳು ಮತ್ತು ಗಣ್ಯರ ಹೆಸರಿನಲ್ಲಿ ನೂರಾರು ನಕಲಿ ಟ್ವಿಟರ್ ಹ್ಯಾಂಡಲ್ʼಗಳು ಮತ್ತು ಫೇಸ್ ಬುಕ್ ಖಾತೆಗಳು ಇವೆ ಎಂದು ಗೋಯೆಂಕಾ ಅರ್ಜಿಯಲ್ಲಿ ತಿಳಿಸಿದ್ದಾರೆ.

ದ್ವೇಷ, ಪ್ರಚೋದನೆ, ಅಥವಾ ದೇಶ ವಿನಾಶಕಾರಿಯಾದ ವಸ್ತುಗಳನ್ನ ಹೊಂದಿರುವ ಜಾಹೀರಾತುಗಳು ಮತ್ತು ಪಾವತಿ ವಿಷಯಗಳನ್ನ ಖಚಿತಪಡಿಸಲು ಒಂದು ಕಾರ್ಯವಿಧಾನದ ಬಗ್ಗೆ ಕೇಂದ್ರಕ್ಕೆ ನಿರ್ದೇಶನಗಳನ್ನು ನೀಡುವಂತೆ ಮನವಿಯು ಕೋರಿದೆ.

ಈ ಅರ್ಜಿಯ ಬಗ್ಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ನೋಟಿಸ್ ಜಾರಿ ಮಾಡಿದ್ದು, ಸಾಮಾಜಿಕ ಜಾಲತಾಣ ನಿಯಂತ್ರಣ ಕೋರಿ ಸಲ್ಲಿಸಿರುವ ಅರ್ಜಿಗಳನ್ನ ಟ್ಯಾಗ್ ಮಾಡಿ ಎಂದು ಆದೇಶ ನೀಡಿದೆ.


SHARE THIS

Author:

0 التعليقات: