Friday, 5 February 2021

ದೇಶಾದ್ಯಂತ ರೈತರ ಚಕ್ಕಾಜಾಮ್ ಪ್ರತಿಭಟನೆ ಆರಂಭ


 ದೇಶಾದ್ಯಂತ ರೈತರ ಚಕ್ಕಾಜಾಮ್ ಪ್ರತಿಭಟನೆ ಆರಂಭ

ಹೊಸದಿಲ್ಲಿ: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಶನಿವಾರ ಮಧ್ಯಾಹ್ನ 12:00 ಗಂಟೆಗೆ ದೇಶಾದ್ಯಂತ ಚಕ್ಕಾಜಾಮ್ (ಹೆದ್ದಾರಿ ತಡೆ)ಪ್ರತಿಭಟನೆ ಆರಂಭವಾಗಿದೆ. 

ಮಧ್ಯಾಹ್ನ 12ರಿಂದ 3ರ ತನಕ ರೈತರು ಕರೆ ನೀಡಿರುವ ಚಕ್ಕಾಜಾಮ್ ಬೆಂಬಲಿಸಿ ಪಂಜಾಬ್ ನ ಅಮೃತ ಸರ ಹಾಗೂ ಮೊಹಾಲಿಯಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು

ಹರ್ಯಾಣದ ಗುರುಗ್ರಾಮದಲ್ಲಿನ ಕೃಷ್ಣ ಚೌಕದಲ್ಲಿ ಶನಿವಾರ ರೈತರು ದೇಶಾದ್ಯಂತ ಕರೆ ನೀಡಿರುವ ಚಕ್ಕಾಜಾಮ್ ಆರಂಭವಾಗಿದೆ. 

ಕೃಷ್ಣ ಚೌಕವು ದಿಲ್ಲಿಯ ನಜಾಫ್ ಗಢ ಹಾಗೂ ಕಪಶೇರಾ ಗಡಿಯಿಂದ ಎರಡು ಕಿ.ಮೀ. ದೂರದಲ್ಲಿದೆ.

ರೈತರು ಕರೆ ನೀಡಿರುವ ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ದಿಲ್ಲಿ ಪೊಲೀಸರು ಐಎಫ್‍ಟಿಯು ರಾಷ್ಟ್ರೀಯ ಖಜಾಂಚಿ ಹಾಗೂ ದಿಲ್ಲಿ ಅಧ್ಯಕ್ಷ ಅನಿಮೇಶ್ ದಾಸ್ ರನ್ನು ಬೆಳಗ್ಗೆ 5 ಗಂಟೆಗೆ ಬಂಧಿಸಿದ್ದಾರೆ.SHARE THIS

Author:

0 التعليقات: