Wednesday, 17 February 2021

ಪಿಎಂ ಕೇರ್ಸ್ ಲೆಕ್ಕ ಕೊಡದವರು ರಾಮಮಂದಿರ ದೇಣಿಗೆ ಲೆಕ್ಕ ಕೊಡುತ್ತಾರಾ : ಸಿದ್ದರಾಮಯ್ಯ


ಪಿಎಂ ಕೇರ್ಸ್ ಲೆಕ್ಕ ಕೊಡದವರು ರಾಮಮಂದಿರ ದೇಣಿಗೆ ಲೆಕ್ಕ ಕೊಡುತ್ತಾರಾ : ಸಿದ್ದರಾಮಯ್ಯ

ಕೊರೋನಾ ಸಂಧರ್ಭದಲ್ಲಿ ಜನಸಾಮಾನ್ಯರಿಂದ ಸಂಗ್ರಹಿಸಲಾದ ಪಿಎಮ್ ಕೇರ್ಸ್ ಹಣದ ಲೆಕ್ಕವನ್ನೇ ಇದುವರೆಗೂ ಸರ್ಕಾರ ಕೊಡಲಿಲ್ಲ. ಇನ್ನು ರಾಮ ಮಂದಿರ ನಿರ್ಮಾಣಕ್ಕೆಂದು ಪಡೆಯಲಾದ ದೇಣಿಗೆಯ ಲೆಕ್ಕ ಕೊಡುತ್ತಾರಾ? ಎಂಬುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.

ಈ ಹಿಂದೆಯೂ ಮಂದಿರ ನಿರ್ಮಾಣಕ್ಕೆಂದು ಹಣ ಇಟ್ಟಿಗೆ ಸಂಗ್ರಹಿಸಿದ್ದಾರೆ. ಅದೆಲ್ಲಾ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ. ಮಂದಿರ ನಿರ್ಮಾಣಕ್ಕೆ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ರೂಪಿಸಿದ್ದಾರೆ. ಆದಾಗ್ಯೂ, ಜನಸಾಮಾನ್ಯರಿಂದ ಹಣ ಲೂಟಿ ಮಾಡುತ್ತಿದ್ದಾರೆ. ಅದರ ಲೆಕ್ಕವನ್ನು ಬಿಜೆಪಿ ಪಕ್ಷ ಖಂಡಿತವಾಗಿಯೂ ಸಾರ್ವಜನಿಕರಿಗೆ ಉತ್ತರ ನೀಡಲೇಬೇಕು ಎಂದು ಹೇಳಿದ್ದಾರೆ.SHARE THIS

Author:

0 التعليقات: