Saturday, 13 February 2021

ಮುಹಿಮ್ಮಾತ್; ಕರಿಬಂಡೆಯಲ್ಲಿ ಕೊರೆದ ಸುನ್ನಿ ಚಳವಳಿಯ ಮೂರು ದಶಕಗಳು


ಮುಹಿಮ್ಮಾತ್;  ಕರಿಬಂಡೆಯಲ್ಲಿ ಕೊರೆದ ಸುನ್ನಿ ಚಳವಳಿಯ ಮೂರು ದಶಕಗಳು

✍🏻  ಝಾಕಿರ್ ಉರುವಾಲ್ ಪದವು


ಜ್ಞಾನ ದಿಗಂತದ ಯಶಸ್ಸಿನ ಪಥದಲ್ಲಿ ಮೂರನೇ ದಶಕದತ್ತ ಮುನ್ನೇರುತ್ತಾ ಇರುವ ಕರ್ನಾಟಕ-ಕೇರಳದ ಗಡಿಭಾಗದಲ್ಲಿರುವ ಒಂದು ಅದ್ಭುತ ತಾಣವಾಗಿದೆ ಮುಹಿಮ್ಮಾತ್.

        ಈ ಹೆಸರು ಕೇಳದವರಿಲ್ಲ.. ಹೆಸರು ಸೂಚಿಸುವಂತೆಯೇ ಜನಸಮೂಹಕ್ಕೆ ಪ್ರಾಮುಖ್ಯತೆಯನ್ನು ಹೊಂದಿದ ಸಮನ್ವಯ ವಿದ್ಯಾಭ್ಯಾಸ ಸಮುಚ್ಚಯವಾಗಿದೆ ಇದು. ಕಾಸರಗೋಡು ಜಿಲ್ಲೆಯ ಪುತ್ತಿಗೆ ಎಂಬ ಕುಗ್ರಾಮದಲ್ಲಿ 30 ಎಕರೆ ವಿಶಾಲವಾದ ಸ್ಥಳದಲ್ಲಿ ತಲೆ ಎತ್ತಿ ನಿಂತಿದೆ.                                    ಸುಮಾರು 29 ವರ್ಷಗಳ ಮುಂಚೆ ಕೇವಲ ಕಲ್ಲು ಮುಳ್ಳುಗಳಿಂದಲೂ ಕರಿಬಂಡೆಗಳಿಂದಲೂ ಆವೃತವಾಗಿದ್ದ ಪಿಶಾಚಿ ಗಳಿಂದಲೂ ಮನುಷ್ಯ ಪಿಶಾಚಿಗಳಾದ ವಹಾಬಿ ಗಳಿಂದಲೂ‌ ಮಲಿನಗೊಂಡಿದ್ದ ಒಂದು ಪ್ರದೇಶವಾಗಿತ್ತು ಮುಹಿಮ್ಮಾತ್ ಒಳಗೊಂಡ ಕಟ್ಟತ್ತಡ್ಕ ಪ್ರದೇಶ.ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಎಂಬ ಆಧ್ಯಾತ್ಮಿಕ ಪುರುಷ‌ರು ನಾಡನ್ನು ಬೆಳಗಿಸಿದರು. ನೈಜ ಪಿಶಾಚಿ ಗಳಿಂದಲೂ ಮನುಷ್ಯ ಪಿಶಾಚಿಗಳು ಆದ ವಹಾಬಿ ಗಳಿಂದಲೂ ನಾಯಕರು ಆ ನಾಡನ್ನು ಸಂರಕ್ಷಿಸಿ ಮುಹಿಮ್ಮಾತ್ ಎಂಬ ಮತ ಲೌಕಿಕ ಸಮನ್ವಯ ವಿದ್ಯಾ ಸಮುಚ್ಚಯವನ್ನು ಕಟ್ಟಿ ಬೆಳೆಸಿ ಅಹ್ಲುಸುನ್ನತಿ ವಲ್ ಜಮಾಅತಿನ ಭದ್ರಕೋಟೆ ಯನ್ನಾಗಿ ಮುಹಿಮ್ಮಾತಿನ ಪ್ರದೇಶವನ್ನು ಬದಲಾಯಿಸಿದರು. ನಿಸ್ವಾರ್ಥ ಹಾಗೂ ನಿಷ್ಕಳಂಕವಾದ ಸೇವೆಯ ಮೂಲಕ ಸಯ್ಯಿದ್ ತಂಙಳುಸ್ತಾದ್ ಹಳಿ ತಪ್ಪಿ ಸಂಚರಿಸುತ್ತಿದ್ದ ಜನತೆಯನ್ನು ನೈಜ ಹಳಿಯಲ್ಲಿ ಭದ್ರಗೊಳಿಸಲು ಸಾಧ್ಯವಾಯಿತು.

           ಫೆಬ್ರವರಿ14 ಸಂಸ್ಥೆಯ 30ನೇ ಸ್ಥಾಪಕ ದಿನ.1400 ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳಿಂದ ವಿದ್ಯಾರ್ಜನೆಗೆಯ್ಯುತಿದ್ದಾರೆ.

ಸಂಸ್ಥೆಯ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್‌ರವರ ಉರೂಸ್ ಮುಬಾರಕ್ ಮಾರ್ಚ್ 19-23 ರವರೆಗೆ‌ ಮುಹಿಮ್ಮಾತ್ ಕ್ಯಾಂಪಸ್‌ನಲ್ಲಿ ವಿಜೃಂಭಣೆಯಿಂದ ನಡೆಯುವ ವಿಷಯ ನಿಮಗೆಲ್ಲರಿಗೂ ಗೊತ್ತಿಲ್ಲವೇ?

           ಸಂಸ್ಥೆಗೆ ತಿಂಗಳಿಗೆ 57ಲಕ್ಷಕ್ಕಿಂತ ಖರ್ಚು ಅಧಿಕವಾಗಿದೆ.3000 ಕ್ವಿಂಟಾಲ್ ಅಕ್ಕಿಯ ಅಗತ್ಯವಿದೆ. ಪ್ರೀತಿಯ ದಾನಿಗಳೇ ನಿಮ್ಮಿಂದಾಗುವ ಸಹಾಯ ಮುಹಿಮ್ಮಾತಿಗೆ ಮೀಸಲಿಡಿ..........

 ಅಲ್ಲಾಹನು  ತ್ವಾಹಿರುಲ್ ಅಹ್ದಲ್ ತಂಙಳ್‌ರವರೊಂದಿಗೆ ಸ್ವರ್ಗದಲ್ಲಿ ನಮ್ಮನ್ನು ಒಂದುಗೂಡಿಸಲಿ ....... ಆಮೀನ್


SHARE THIS

Author:

1 comment: