Sunday, 28 February 2021

ಅಭಿಮಾನಿಗಳ ಆತಂಕಕ್ಕೆ ಕಾರಣವಾದ ಅಮಿತಾಬ್ ಬಚ್ಚನ್ ಬ್ಲಾಗ್ ಪೋಸ್ಟ್


 ಅಭಿಮಾನಿಗಳ ಆತಂಕಕ್ಕೆ ಕಾರಣವಾದ ಅಮಿತಾಬ್ ಬಚ್ಚನ್ ಬ್ಲಾಗ್ ಪೋಸ್ಟ್

ಹೊಸದಿಲ್ಲಿ: ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿ ತಾನು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ ಎಂದು ತನ್ನ ಹೊಸ ಬ್ಲಾಗ್ ಪೋಸ್ಟ್ ನಲ್ಲಿ ಅಮಿತಾಬ್ ಬಚ್ಚನ್ ತನ್ನ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ತನಗೆ ಬ್ಲಾಗ್ ನಲ್ಲಿ ಹೆಚ್ಚು ಬರೆಯಲು ಸಾಧ್ಯವಾಗುತ್ತಿಲ್ಲ ಎಂದು 'ಬಿಗ್ ಬಿ' ಬರೆದಿದ್ದಾರೆ. ಬಚ್ಚನ್ ಅವರ ಬ್ಲಾಗ್ ಪೋಸ್ಟ್ ಅವರ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಹಿರಿಯ ನಟನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಶನಿವಾರ(ಫೆಬ್ರವರಿ 27)ರಾತ್ರಿ ತಮ್ಮ ಬ್ಲಾಗ್ ನ್ನುಕೈಗೆತ್ತಿಕೊಂಡ ಬಚ್ಚನ್, “ವೈದ್ಯಕೀಯ ಪರಿಸ್ಥಿತಿ…ಸರ್ಜರಿ....ನನಗೆ ಬರೆಯಲು ಆಗುತ್ತಿಲ್ಲ’’ಎಂದು ಬರೆದಿದ್ದರು.

ಬಚ್ಚನ್ ತನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು ನಟನ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಲಾರಂಭಿಸಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಶುಕ್ರವಾರ(ಫೆ.26)ತಡರಾತ್ರಿ ಟ್ವೀಟಿಸಿದ್ದು, ರಹಸ್ಯ ಸಂದೇಶವನ್ನು ಹಿಂದಿಯಲ್ಲಿ ಬರೆದಿದ್ದರು.

ಕಳೆದ ವರ್ಷದ ಜುಲೈನಲ್ಲಿ ಅಮಿತಾಬ್ ಬಚ್ಚನ್ ಗೆ ಕೊರೋನ ವೈರಸ್ ಸೋಂಕು ತಗಲಿತ್ತು. ಬಚ್ಚನ್ ವೈರಸ್‍ನಿಂದ ಚೇತರಿಸಿಕೊಂಡಿದ್ದರು. ಸುಮಾರು 22 ದಿನಗಳ ಕಾಲ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿದ್ದ ಬಚ್ಚನ್ ಆಗಸ್ಟ್ 2ರಂದು ಮನೆಗೆ ವಾಪಸಾಗಿದ್ದರು. 


SHARE THIS

Author:

0 التعليقات: