ಉಡುಪಿ ಜಿಲ್ಲಾದ್ಯಂತ ಭಾರೀ ಗಾಳಿಮಳೆ
ಉಡುಪಿ, ಫೆ.21: ಉಡುಪಿ ಜಿಲ್ಲೆಯಾದ್ಯಂತ ರವಿವಾರ ಮಧ್ಯಾಹ್ನ ವೇಳೆ ಭಾರೀ ಗಾಳಿಯೊಂದಿಗೆ ಅಕಾಲಿಕ ಮಳೆಯಾಗಿದ್ದು, ಇಡೀ ವಾತಾವರಣವನ್ನು ತಂಪಾಗಿಸಿದೆ.
ಉಡುಪಿ ನಗರ, ಮಣಿಪಾಲ, ಬ್ರಹ್ಮಾವರ, ಕುಂದಾಪುರ, ಕಾಪು, ಕಾರ್ಕಳ, ಹೆಬ್ರಿ ತಾಲೂಕಿನ ಹಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ತೀರಾ ತೊಂದರೆ ಅನುಭವಿಸಬೇಕಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದ ಗೃಹಪ್ರವೇಶ, ವಿವಾಹ ಸೇರಿದಂತೆ ಶುಭ ಕಾರ್ಯಗಳಿಗೆ ಮಳೆಯಿಂದಾಗಿ ಅಡ್ಡಿಯಾಯಿತು.
0 التعليقات: