ಹಳೆಯ ಕಟ್ಟಡ ಕುಸಿತ: ಮೂವರು ಕಾರ್ಮಿಕರ ಸಾವು
ಮಧುರೈ: ತಮಿಳುನಾಡಿನ ಮಧುರೈನಲ್ಲಿ ಸೋಮವಾರ ಹಳೆಯ ಕಟ್ಟಡವೊಂದು ನವೀಕರಣ ಕಾರ್ಯದ ವೇಳೆ ಕುಸಿದು ಬಿದ್ದಿದ್ದು, ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
'ಈ ಹಳೆಯ ಕಟ್ಟಡದಲ್ಲಿ 10 ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದ ನವೀಕರಣ ಕಾರ್ಯದಲ್ಲಿ ನಿರತರಾಗಿದ್ದರು. ಅದರಲ್ಲಿ ಮೂವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ . ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.
0 التعليقات: