Friday, 5 February 2021

'ಬಿಎಂಟಿಸಿ ಸಿಬ್ಬಂದಿ'ಗಳಿಗೆ ಗುಡ್ ನ್ಯೂಸ್ : 'ಲಾಕ್ ಡೌನ್'ಸಂದರ್ಭದ 'ಗೈರುಹಾಜರಿ' ಪ್ರಕರಣದಲ್ಲಿ ಸಿಬ್ಬಂದಿಗಳಿಗೆ 'ಶಿಸ್ತು ಕ್ರಮ'ದಿಂದ ವಿನಾಯಿತಿ


'ಬಿಎಂಟಿಸಿ ಸಿಬ್ಬಂದಿ'ಗಳಿಗೆ ಗುಡ್ ನ್ಯೂಸ್ : 'ಲಾಕ್ ಡೌನ್'ಸಂದರ್ಭದ 'ಗೈರುಹಾಜರಿ' ಪ್ರಕರಣದಲ್ಲಿ ಸಿಬ್ಬಂದಿಗಳಿಗೆ 'ಶಿಸ್ತು ಕ್ರಮ'ದಿಂದ ವಿನಾಯಿತಿ

ಬೆಂಗಳೂರು : ಲಾಕ್ ಡೌನ್ ಅವಧಿಯಲ್ಲಿ ಸಂಸ್ಥೆಯ ಸಿಬ್ಬಂದಿಗಳ ವಿರುದ್ಧ ದಾಖಲಾಗಿರುವ ಗೈರುಹಾಜರಿ ಪ್ರರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ, ಅವುಗಳನ್ನು ಮಾನವೀಯತೆ ದೃಷ್ಠಿಯಿಂದ ಲಘುವಾಗಿ ಪರಿಗಣಿಸಿ, ಇತ್ಯರ್ಥ ಪಡಿಸುವಂತೆ ಬಿಎಂಟಿಸಿ ಟಿಪ್ಪಣಿಯಲ್ಲಿ ತಿಳಿಸಿದೆ. ಈ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ 90 ದಿನಗಳಿಗಿಂತ ಕಡಿಮೆ ಗೈರುಹಾಜರಿಯಾದಂತ ಸಿಬ್ಬಂದಿಗಳ ಮೇಲಿನ ಪ್ರಕರಣಗಳನ್ನು ಮಾನವೀಯತೆಯ ದೃಷ್ಠಿಯಿಂದ ಬಿಎಂಟಿಸಿ ಶಿಸ್ತು ಕ್ರಮದಿಂದ ವಿನಾಯಿತಿ ನೀಡಿದೆ.

ಈ ಕುರಿತಂತೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಟಿಪ್ಪಣಿ ಹೊರಡಿಸಿದ್ದು, ಕೋವಿಡ್-19 ಸಾಂಕ್ರಾಮಿಕವು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ದೃಷ್ಠಿಯಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ದಿನಾಂಕ 23-03-2020ರಿಂದ ದಿನಾಂಕ 17-05-2020ರವರೆಗೆ ಪೂರ್ಣ ಪ್ರಮಾಣದ ಲಾಕ್ ಡೌನ್ ಅನ್ನು ಘೋಷಿಸಿರುತ್ತದೆ.

ಮುಂದುವರೆದಂತೆ ದಿನಾಂಕ 15-07-2020ರಿಂದ ದಿನಾಂಕ 21-07-2020ರವರೆಗೆ ಬೆಂಗಳೂರು ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರವು ಸಹ ಆದೇಶಿಸಿರುತ್ತದೆ. ಈ ಹಿನ್ನಲೆಯಲ್ಲಿ ತುರ್ತು ಅಗತ್ಯ ಸಾರಿಗೆ ಸೇವೆಯನ್ನು ಹೊರತುಪಡಿಸಿ, ಸಂಸ್ಥೆಯ ಉಳಿದ ಸಾರಿಗೆ ಸೇವೆ, ಅನುಸೂಚಿಗಳ ಆಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದರಿಂದ ಸಂಸ್ಥೆಯ ಕೆಲವು ಸಿಬ್ಬಂದಿಗಳು ದೈನಂದಿನ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.

ಈ ಹಿನ್ನಲೆಯಲ್ಲಿ ದಿನಾಂಕ 23-03-2020ರಿಂದ 01-10-2020ರ ಅವಧಿಯಲ್ಲಿ ಸಂಸ್ಥೆಯಲ್ಲಿ ಜಾರಿಯಲ್ಲಿರುವ ಸುತ್ತೋಲೆಯ ಅನ್ವಯ 90 ದಿನಗಳಿಗಿಂತ ಕಡಿಮೆ ಅವಧಿಯ ಗೈರುಹಾಜರಿ ಪ್ರಕರಣಗಳಲ್ಲಿ ಸಂಸ್ಥೆಯು ಅಳವಡಿಸಿಕೊಂಡಿರುವ ಕ.ರಾ.ರ.ಸಾ.ಸಂಸ್ಥೆಯ ನೌಕರರ ( ನಡೆತೆ ಮತ್ತು ಶಿಸ್ತು) ನಿಯಮಾವಳಿ 1971ರ ನಿಯಮ-22ರಡಿಯಲ್ಲಿ ಘಟಕದ ಮಟ್ಟದಲ್ಲಿ ಆರೋಪಣಾ ಪತ್ರ ಜಾರಿಗೊಳಿಸಿ, ಶಿಸ್ತು ಕ್ರಮ ಜರುಗಿಸಬೇಕಾಗಿರುತ್ತದೆ. ಅಲ್ಲದೇ 90 ದಿನಗಳ ಅವಧಿ ಮೀರಿದ ಗೈರುಹಾಜರಿ ಪ್ರಕರಣಗಳಲ್ಲಿ ಕೇಂದ್ರ ಕಛೇರಿ ಮಟ್ಟದಲ್ಲಿ ನಿಯಮ-23ರ ಅಡಿಯಲ್ಲಿ ಆರೋಪಣಾ ಪತ್ರ ಜಾರಿಗೊಳಿಸಿ, ಶಿಸ್ತು ಕ್ರಮ ಜರುಗಿಸಬೇಕಾಗಿರುತ್ತದೆ.

ಆದ್ರೇ ಲಾಕ್ ಡೌನ್ ಅವಧಿಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರುಹಾಜರಾಗಿರುವ ಸಮಯ ಮತ್ತು ಸಂದರ್ಭವನ್ನು ಅವಲೋಕಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಸೂಕ್ತವಾಗಿರುತ್ತೆ ಹಾಗೂ ಇಂತಹ ತುರ್ತು ಆರೋಗ್ಯ ಸಂದರ್ಭದಲ್ಲಿ ಸಂಸ್ಥೆಯ ನೌಕರರ ಮನಸ್ಥೈರ್ಯವನ್ನು ಹೆಚ್ಚಿಸುವುದು ಹಾಗೂ ನೌಕರರ ಪರ ಕಾಳಜಿ ವಹಿಸುವುದು ಅವಶ್ಯಕವಾಗಿರುತ್ತದೆ.

ಆದ್ದರಿಂದ ಲಾಕ್ ಡೌನ್ ಅವಧಿಯಲ್ಲಿ ಸಂಸ್ಥೆಯ ಸಿಬ್ಬಂದಿಗಳ ವಿರುದ್ಧ ದಾಖಲಾಗಿರುವ ಗೈರುಹಾಜರಿ ಪ್ರಕರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ, ಅವುಗಳನ್ನು ಮಾನವೀಯ ದೃಷ್ಠಿಯಿಂದ ಲಘುವಾಗಿ ಪರಿಗಣಿಸಿ, ಇತ್ಯರ್ಥಪಡಿಸುವುದು ಸೂಕ್ತವಾಗಿರುತ್ತದೆ.

ಅದರಂತೆ, ಸಂಸ್ಥೆಯ ಎಲ್ಲಾ ಶಿಸ್ತುಪಾಲನಾಧಿಕಾರಿಗಳು ದಿನಾಂಕ 23-03-2020ರಿಂದ 01-10-2020ರ ಅವಧಿಯಲ್ಲಿ ದಾಖಲಾಗಿರುವ ಗೈರುಹಾಜರಿ ಪ್ರಕರಣಗಳನ್ನು ಮಾತ್ರ ಲಘುವಾಗಿ ಪರಿಗಣಿಸಿ, ಇತ್ಯರ್ಥಪಡಿಸಲು ಸೂಚಿಸಿದ್ದಾರೆ. ಜೊತೆಗೆ ಗೈರು ಹಾಜರಿ ಅವಧಿ 90 ದಿನಗಳಿಗಿಂತ ಕಡಿಮೆ ಅಥವಾ ಹೆಚ್ಚಿನ ಅವಧಿಯ ಗೈರು ಹಾಜರಿ ಪ್ರಕರಣಗಳನ್ನು ಕ.ರಾ.ಸಾ.ಸಂಸ್ಥೆಯ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿ 1971ರ ನಿಯಮ-22ರಡಿಯಲ್ಲಿ ಆರೋಪಣಾ ಪತ್ರ ಜಾರಿಗೊಳಿಸಿ, (ನಡತೆ ಮತ್ತು ಶಿಸ್ತು) ನಿಯಮಾವಳಿ 1971ರ ಭಾಗ-3ರ 18(ಎ ಮತ್ತು ಬಿ)ರಲ್ಲಿ ಸ್ಪಷ್ಟ ಪಡಿಸಿರುವ ಯಾವುದೇ ಶಿಕ್ಷೆಗಳನ್ನು ವಿಧಿಸದೇ ಇತ್ಯರ್ಥಪಡಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ಬಿಎಂಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

 


SHARE THIS

Author:

0 التعليقات: