Tuesday, 16 February 2021

ವಿವಾದಿತ ರಾಮಮಂದಿರಕ್ಕೆ ದೇಣಿಗೆ ನೀಡಲಾರೆ; ವಿವಾದ ಇನ್ನೂ ಇದೆ; ಸಿದ್ದರಾಮಯ್ಯ

ವಿವಾದಿತ ರಾಮಮಂದಿರಕ್ಕೆ ದೇಣಿಗೆ ನೀಡಲಾರೆ; ವಿವಾದ ಇನ್ನೂ ಇದೆ; ಸಿದ್ದರಾಮಯ್ಯ


ವಿವಾದಿತ ರಾಮಮಂದಿರಕ್ಕೆ ಹಣ ಕೊಡುವುದಿಲ್ಲ, ಬೇರೆ ಕಡೆ ರಾಮಮಂದಿರ ಕಟ್ಟುವುದಾದರೆ ದೇಣಿಗೆ ನೀಡುತ್ತೇನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರಕ್ಕೆ ದೇಣಿಗೆ ಕೇಳಿ ನಮ್ಮ ಮನೆಗೂ ಕೆಲವರು ಬಂದಿದ್ದರು. ವಿವಾದಿತ ರಾಮಮಂದಿರಕ್ಕೆ ಹಣ ಕೊಡುವುದಿಲ್ಲ, ಬೇರೆಡೆ ಕಟ್ಟಿದರೆ ಕೊಡುತ್ತೇನೆ ಎಂದು ಹೇಳಿ ಕಳಿಸಿದ್ದೇನೆ ಎಂದು ತಿಳಿಸಿದರು.


‘ಬಾಬರಿ ಮಸೀದಿ ವಿವಾದವನ್ನು ಸುಪ್ರೀಂಕೋರ್ಟ್ ಇತ್ಯರ್ಥಪಡಿಸಿದ್ದರೂ ಅದರ ಬಗ್ಗೆ ಇನ್ನೂ ವಿವಾದ ಇದ್ದೇ ಇದೆ. ರಾಮಮಂದಿರವನ್ನು ಅಯೋಧ್ಯೆಯಲ್ಲೇ ಕಟ್ಟಬೇಕು ಎಂದೇನಿಲ್ಲ. ನಮ್ಮ ಊರಿನಲ್ಲಿ ರಾಮಮಂದಿರ ಕಟ್ಟಿದರೆ ಅದಕ್ಕೆ ದೇಣಿಗೆ ನೀಡುತ್ತೇನೆ. ಆ ರಾಮನಿಗೆ ಕೊಡುವುದಿಲ್ಲ, ಈ ರಾಮನಿಗೆ ಕೊಡುತ್ತೇನೆ ಎಂದು ತಮ್ಮ ಎಂದಿನ ಶೈಲಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳಿಗೆ ಗುರುತು ಹಾಕಲಾಗುತ್ತಿದೆ ಎಂಬ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಕುಮಾರಸ್ವಾಮಿ ಅವರ ಬಳಿಯೇ ಕೇಳಿ, ನಮ್ಮ ಮನೆಗೆ ಯಾರೂ ಗುರುತು ಹಾಕಿಲ್ಲ ಎಂದು ಹೇಳಿದ್ದಾರೆ.SHARE THIS

Author:

0 التعليقات: