ಪಾನ್ ಮಸಾಲ, ಸಾಲ ನೀಡದ್ದಕ್ಕೆ ಅಂಗಡಿ ಮಾಲಕನ ಮಗನನ್ನು ಗುಂಡಿಟ್ಟು ಕೊಲೆ
ಪಾಟ್ನಾ: 20 ರೂ. ಬೆಲೆಯ ಪಾನ್ ಮಸಾಲವನ್ನು ಸಾಲವಾಗಿ ನೀಡಲಿಲ್ಲ ಎಂಬ ಕಾರಣಕ್ಕೆ ಅಂಗಡಿಯ ಮಾಲಕನ ಮಗನನ್ನು ಗುಂಡಿಟ್ಟು ಕೊಂದಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಸೋಮವಾರ ಸಂಜೆ ತ್ರಿವೇಣಿ ಗಂಜ್ ನಲ್ಲಿ ಘಟನೆ ನಡೆದಿದ್ದು, ಆರೋಪಿ ಅಜಿತ್ ಕುಮಾರ್ ಕಿರಾಣಿ ಅಂಗಡಿಯ ಮಾಲಕನ ಪುತ್ರ ಮಿಥಿಲೇಶ್ ನನ್ನು ಗುಂಡಿಟ್ಟು ಕೊಂದಿದ್ದಾನೆ. ಹಿಂದಿನ ದಿನ ತನಗೆ 20 ರೂ. ಬೆಲೆಯ ಪಾನ್ ಮಸಾಲ ನೀಡದ್ದಕ್ಕೆ ಅಜಿತ್ ಈ ಕೃತ್ಯ ಎಸಗಿದ್ದಾನೆ.
ರವಿವಾರ ತನಗೆ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಮಿಥಲೇಶ್ ತಂದೆಯೊಂದಿಗೆ ಅಜಿತ್ ಜಗಳವಾಡಿಕೊಂಡಿದ್ದ. ಮರು ದಿನ ತನ್ನ ಸಹಚರರೊಂದಿಗೆ ಅಜಿತ್ ಅಂಗಡಿಗೆ ಬಂದಾಗ ಅಂಗಡಿ ಮಾಲಕನ ಪುತ್ರ ಅಂಗಡಿಯಲ್ಲಿದ್ದ. ಅಜಿತ್ ಸಾಲ ಕೊಡಲಿಲ್ಲ ಎಂಬ ವಿಚಾರಕ್ಕೆ ಮತ್ತೊಮ್ಮೆ ಜಗಳ ಆಡಿದ್ದು, ಪಿಸ್ತೂಲ್ ಹೊರ ತೆಗೆದು ಗುಂಡು ಹಾರಿಸಿದ್ದಾನೆ. ಘಟನೆ ನಡೆಯುವಾಗ ಮೃತ ಮಿಥಿಲೇಶ್ ತಮ್ಮ ಹತ್ತಿರವೇ ಇದ್ದ. ಆತ ಸ್ಥಳಕ್ಕೆ ಬರುವ ವೇಳೆಗೆ ಹಂತಕರು ಪರಾರಿಯಾಗಿದ್ದರು.
ತ್ರಿವೇಣಿಗಂಜ್ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ಹಂತಕರ ಸೆರೆಗೆ ಬಲೆ ಬೀಸಿದ್ದಾರೆ.
0 التعليقات: