ಭಾರತಕ್ಕೆ ಕಾಲಿಟ್ಟ ಬ್ರೆಜಿಲ್, ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೋನಾ ವೈರಸ್
ನವದೆಹಲಿ : ಭಾರತದಲ್ಲಿ ಕೋವಿಡ್-19 ರ ಬ್ರೆಜಿಲ್ ಮಾದರಿಯ ಒಂದು ಪ್ರಕರಣ ಮತ್ತು ದಕ್ಷಿಣ ಆಫ್ರಿಕಾ ಮಾದರಿಯ ನಾಲ್ಕು ಪ್ರಕರಣ ದಾಖಲಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದ ಮಹಾ ನಿರ್ದೇಶಕ ಡಾ.ಬಲರಾಮ್ ಭಾರ್ಗವ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೋವಿಡ್-19 ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಾ.ಭಾರ್ಗವ, ಸೋಂಕಿತ ಜನರು ಮತ್ತು ಅವರ ಸಂಪರ್ಕಗಳನ್ನು ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
'ಸಾರ್ಸ್-ಕೊವಿ-2 ನ ದಕ್ಷಿಣ ಆಫ್ರಿಕಾ ರೂಪಾಂತರವನ್ನು ಪ್ರತ್ಯೇಕಿಸಲು ಮತ್ತು ಸಂಸ್ಕರಿಸಲು ಐಸಿಎಂಆರ್-ಎನ್ ಐವಿ ಪ್ರಯತ್ನಿಸುತ್ತಿದೆ, ಹಾಗೆಯೇ SAS-CoV-2 ನ ಬ್ರೆಜಿಲ್ ರೂಪಾಂತರವನ್ನು ಐಸಿಎಂಆರ್-ಎನ್ ಐವಿ-ಪುಣೆಯಲ್ಲಿ ಪ್ರತ್ಯೇಕಿಸಿ ಸಂಸ್ಕರಿಸಲಾಗಿದೆ ಎಂದು ಡಾ.ಭಾರ್ಗವ ಹೇಳಿದರು.
ಭಾರತದಲ್ಲಿ ಪ್ರಸ್ತುತ 187 ರೋಗಿಗಳು ಕೊವಿಡ್-19 ವೈರಸ್ ನ ಯುಕೆ ವೈರಸ್ ಸೋಂಕಿಗೆ ಒಳಗಾದವರು ಇದ್ದಾರೆ ಎಂದು ಐಸಿಎಂಆರ್ ಮುಖ್ಯಸ್ಥರು ತಿಳಿಸಿದ್ದಾರೆ. ಯುಕೆ ರೂಪಾಂತರದಿಂದ ಸೋಂಕಿತಜನರಲ್ಲಿ ಯಾವುದೇ ಸಾವುಗಳು ಕಂಡುಬಂದಿಲ್ಲ.
'ಎಲ್ಲ ದೃಢಪಟ್ಟಿರುವ ಪ್ರಕರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಪರ್ಕಗಳನ್ನು ಪ್ರತ್ಯೇಕಿಸಿ ಪರೀಕ್ಷಿಸಲಾಗಿದೆ. ಯುಕೆ ರೂಪಾಂತರಕ್ಕಿಂತ ಭಿನ್ನವಾಗಿರುವ ಕಾರಣ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲಿಯನ್ ರೂಪಾಂತರಗಳ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಪ್ರಯೋಗಗಳು ನಡೆಯುತ್ತಿದೆ ಎಂದು ಐಸಿಎಂಆರ್ ಮುಖ್ಯಸ್ಥರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಳಿ ಈಗಾಗಲೇ 44 ದೇಶಗಳಿಗೆ ಹರಡಿದೆ ಎಂದು ಡಾ.ಭಾರ್ಗವ ಮಾಹಿತಿ ನೀಡಿದರು. ಭಾರತದಲ್ಲಿ ದಕ್ಷಿಣ ಆಫ್ರಿಕಾ ದ ರೂಪಾಂತರವನ್ನು ವರದಿ ಮಾಡಿದ ನಾಲ್ಕು ಜನರು ಅಂಗೋಲಿಯ (1), ತಾಂಜಾನಿಯಾ (1) ಮತ್ತು ದಕ್ಷಿಣ ಆಫ್ರಿಕಾ (2) ರಿಂದ ಬಂದವರು.
ಬ್ರೆಜಿಲ್ ನ ರೂಪಾಂತರವು 15 ದೇಶಗಳಲ್ಲಿ ವರದಿಯಾಗಿದೆ. 2021ರ ಫೆಬ್ರವರಿಯಲ್ಲಿ ಭಾರತ ಮೊದಲ ಪ್ರಕರಣ ದಾಖಲಿಸಿದೆ ಎಂದು ಅವರು ತಿಳಿಸಿದ್ದಾರೆ.
0 التعليقات: