Friday, 5 February 2021


ರಾಜ್ಯ ರೈತರಿಂದ ‘ಚಕ್ಕಾ ಜಾಮ್’ ಹೋರಾಟಕ್ಕೆ ಬೆಂಬಲ| ನಾಳೆ ಯಾವೆಲ್ಲ ಹೆದ್ದಾರಿಗಳು ಬಂದ್ ಆಗಲಿದೆ? ಇಲ್ಲಿದೆ ವಿವರ!

ಬೆಂಗಳೂರು: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆ ವಿರೋಧಿಸಿ ನಾಳೆ ರೈತರು ಕರೆ ನೀಡಿರುವ ‘ಚಕ್ಕಾ ಜಾಮ್’ ಹೋರಾಟಕ್ಕೆ ರಾಜ್ಯದ ರೈತರು ಬೆಂಬಲ ವ್ಯಕ್ತಪಡಿಸಿ ರಾಜ್ಯದ ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ.

ನಾಳೆ ರಾಜ್ಯಾದ್ಯಂತ ರೈತರು ಪ್ರತಿಭಟನೆ ನಡೆಸಲಿದ್ದಾರೆ.  ಮಧ್ಯಾಹ್ನ 12ಗಂಟೆಯಿಂದ 3 ಗಂಟೆಯವರೆಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ರೈತರು ಬಂದ್ ಮಾಡಲಿದ್ದಾರೆ.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ, ಬೆಂಗಳೂರು-ಮೈಸೂರು, ಬಿಡದಿ-ಮಂಡ್ಯ ರಾಜ್ಯ ಹೆದ್ದಾರಿ, ರಾಯಚೂರು ಅಸ್ಕಿಹಾಲ್ ಬಳಿ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿ, ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು -ಮಾಗಡಿ ರಸ್ತೆ ರಾಜ್ಯ ಹೆದ್ದಾರಿ, ಬೆಂಗಳೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ರೈತರು ಬಂದ್ ಮಾಡಲಿದ್ದಾರೆ.SHARE THIS

Author:

0 التعليقات: