ಬೆಲೆ ಏರಿಕೆ ಬಿಸಿಯೊಂದಿಗೆ 'ದೇಶದ ಜನತೆಗೆ ಮತ್ತೊಂದು ಬಿಗ್ ಶಾಕ್' :ಶೀಘ್ರದಲ್ಲೇ 'ಮೊಬೈಲ್ ರಿಚಾರ್ಜ್ ದರ' ಏರಿಕೆ
ನವದೆಹಲಿ : ದೇಶದಲ್ಲಿ ಲಕ್ಷಾಂತರ ಫೋನ್ ಬಳಕೆದಾರರಿಗೆ ಕೆಟ್ಟ ಸುದ್ದಿ ಬರುತ್ತಿದೆ. ಹೌದು,, ಶೀಘ್ರದಲ್ಲೇ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸಲಿವೆ ಎನ್ನಲಾಗಿದೆ. ಈಗ ಬಳಕೆದಾರರು ಡೇಟಾ ಮತ್ತು ವಾಯ್ಸ್ ಕಾಲಿಂಗ್ ಗಾಗಿ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ನೆಟ್ ವರ್ಕ್ ಪೂರೈಕೆದಾರ ಕಂಪನಿಗಳು ಮೊಬೈಲ್ ಟ್ಯಾರಿಫ್ ಗಳ ಬೆಲೆಯನ್ನು ಏರಿಸಲು ಹೊರಟಿವೆ ಎನ್ನಲಾಗಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ ಏಪ್ರಿಲ್ 1 ರಿಂದ 2021-22ರ ವರೆಗೆ ನೆಟ್ ವರ್ಕ್ ಪೂರೈಕೆದಾರ ಕಂಪನಿಗಳು ತಮ್ಮ ಆದಾಯ ವೃದ್ಧಿಯನ್ನು ಹೆಚ್ಚಿಸಲು ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಬಹುದು ಎನ್ನಲಾಗಿದೆ. ಕಳೆದ ವರ್ಷಕೂಡ ಕೆಲವು ನೆಟ್ ವರ್ಕ್ ಪ್ರೊವೈಡರ್ ಕಂಪನಿಗಳು ತಮ್ಮ ದರದರವನ್ನು ಹೆಚ್ಚಿಸಿದ್ದಾವೆ. ಮುಂಬರುವ ಎರಡು ವರ್ಷಗಳಲ್ಲಿ ಟೆಲಿಕಾಂ ವಲಯದ ಉದ್ಯಮದ ಆದಾಯವು ಶೇ.11 ರಿಂದ 13 ರಷ್ಟು ಮತ್ತು 2022ರ ಆರ್ಥಿಕ ವರ್ಷದಲ್ಲಿ ಸುಮಾರು 38% ಆಗಲಿದೆ ಎಂದು ವರದಿ ಮಾಡಲಾಗಿದೆ. ದೇಶದಲ್ಲಿ ಕರೋನಾ ವೈರಸ್ ಸಾಂಕ್ರಾಮಿಕ ರೋಗವು ಎಲ್ಲಾ ಉದ್ಯಮದ ಮೇಲೆ ಪರಿಣಾಮ ಬೀರಿತು, ಆದರೆ ಟೆಲಿಕಾಂ ಉದ್ಯಮದ ಮೇಲೆ ಗಮನಾರ್ಹ ಪರಿಣಾಮಬೀರಲಿಲ್ಲ. ಲಾಕ್ ಡೌನ್ ಸಮಯದಲ್ಲಿ ಕೂಡ, ಮನೆಯಿಂದ ಕೆಲಸ, ಆನ್ ಲೈನ್ ಕ್ಲಾಸ್, ವೀಡಿಯೊ ಸ್ಟ್ರೀಮಿಂಗ್ ಇತ್ಯಾದಿಗಳಿಂದ ಡೇಟಾಹೆಚ್ಚು ಬಳಕೆಯಾಗಿದೆ.
0 التعليقات: