Saturday, 20 February 2021

ಉತ್ತರ ಕರ್ನಾಟಕದ ದೀನೀ ದಅವಾದಲ್ಲಿ ಕೆಸಿಎಫ್ ಪ್ರಮುಖ ಪಾತ್ರ ವಹಿಸುತ್ತಿದೆ- ಶಾಫಿ ಸಅದಿ


ಉತ್ತರ ಕರ್ನಾಟಕದ ದೀನೀ ದಅವಾದಲ್ಲಿ ಕೆಸಿಎಫ್ ಪ್ರಮುಖ ಪಾತ್ರ ವಹಿಸುತ್ತಿದೆ- ಶಾಫಿ ಸಅದಿ

   

ರಿಯಾದ್: ಕೆಸಿಎಫ್ ರಿಯಾದ್ ಝೋನ್ ವತಿಯಿಂದ ಕೆಸಿಎಫ್ ಡೇ ಕಾರ್ಯಕ್ರಮವನ್ನು ಝೂಮ್ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ರಿಯಾದ್ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಇಲ್ಯಾಸ್ ಲತೀಫಿ ಉಸ್ತಾದ್ ಕಿರಾಅತ್ ಪಠಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಯಾದ್ ಝೋನ್ ಸಂಘಟನಾ ಇಲಾಖೆ ಅಧ್ಯಕ್ಷರಾದ ಮುಸ್ತಫಾ ಸಅದಿ ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮುಫ್ತಿ ಅನ್ವರಲಿ ದುವಾದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿದ್ದ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು ಸಭೆಯನ್ನುದ್ದೇಶಿಸಿ ಮಾತನಾಡಿ ಕೆಸಿಎಫ್ ಸಂಘಟನೆಯು ಜನರನ್ನು ಯಾವ ರೀತಿ ಆಕರ್ಷಿಸಿದೆ ಎಂಬುದನ್ನು ತನ್ನ ಅನುಭವದ ಮೂಲಕ ಹಂಚಿಕೊಂಡರಲ್ಲದೆ, ಉತ್ತರ ಕರ್ನಾಟಕದಲ್ಲಿ ದೀನೀ ದಅವಾ ರಂಗದಲ್ಲಿ ಕಾರ್ಯಾಚರಿಸುತ್ತಿರುವ ಇಹ್ಸಾನ್ ಕರ್ನಾಟಕಕ್ಕೆ ಯಾವ ರೀತಿ ಬೆನ್ನೆಲುಬಾಗಿ ಕಾರ್ಯಾಚರಿಸುತ್ತಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು.

ಸೌದಿ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಮಾತನಾಡಿ ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರ ಜವಾಬ್ದಾರಿಯನ್ನು ಸವಿವರವಾಗಿ ವಿವರಿಸಿದರು. ಸೌದಿ ರಾಷ್ಟ್ರೀಯ ಸಂಘಟನಾ ಇಲಾಖೆ ಕಾರ್ಯದರ್ಶಿ ಬಶೀರ್ ತಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಹ್ಸಾನ್ ಕರ್ನಾಟಕದ ಅಡ್ಮಿನಿಸ್ಟ್ರೇಟರ್ ಅನ್ವರ್ ಅಸ್ಅದಿ ಶುಭಾಶಯ ಕೋರಿದರು.

ನಝೀರ್ ಕಕ್ಕಿಂಜೆಯವರು ಸ್ವಾಗತಿಸಿದ ಕಾರ್ಯಕ್ರಮವನ್ನು ಅಶ್ರಫ್ ಕಿಲ್ಲೂರು ನಿರೂಪಿಸಿದರು. ಕೊನೆಯಲ್ಲಿ ಹಬೀಬ್ ಟಿಎಚ್ ಧನ್ಯವಾದ ಹೇಳಿದರು. ಇಲ್ಯಾಸ್ ಲತೀಫಿಯವರ ದುವಾದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.SHARE THIS

Author:

0 التعليقات: