Friday, 12 February 2021

ಭಾರತದ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ : ಮಾಜಿ ಸಿಜೆಐ ರಂಜನ್ ಗೊಗೊಯ್ ಆಘಾತಕಾರಿ ಹೇಳಿಕೆ

 

ಭಾರತದ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ : ಮಾಜಿ ಸಿಜೆಐ ರಂಜನ್ ಗೊಗೊಯ್ ಆಘಾತಕಾರಿ ಹೇಳಿಕೆ

ನವದೆಹಲಿ : ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ ಎಂದು ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ, ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತದ ಸಿಜೆಐ ಆಗಿ ನಿವೃತ್ತಿಯಾದ 15 ತಿಂಗಳ ಬಳಿಕ ಗೊಗೊಯ್ ಈ ಹೇಳಿಕೆ ನೀಡಿದ್ದಾರೆ.

“ನಾನು ಸಮಸ್ಯೆಗಳನ್ನು ಹೇಳಿಕೊಂಡು ನ್ಯಾಯಾಲಯಕ್ಕೆ ಹೋಗುವುದಿಲ್ಲ. ಏಕೆಂದರೆ, ತೀರ್ಪಿಗಾಗಿ ಕೊನೆಯಿಲ್ಲದೆ ಕಾಯಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.

“ನೀವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಬಯಸುತ್ತೀರಿ. ಆದರೆ, ನಿಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ. ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ನೀವು ನ್ಯಾಯಾಲಯಕ್ಕೆ ಹೋದರೆ, ನೀವು ಯಾವುದೇ ತೀರ್ಪನ್ನೂ ಪಡೆಯಲು ಸಾಧ್ಯವಿಲ್ಲ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ಇಂಡಿಯಾ ಟುಡೇ ಗ್ರೂಪ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗೊಗೊಯ್ ಅಭಿಪ್ರಾಯ ಪಟ್ಟಿದ್ದಾರೆ.

ನ್ಯಾ. ಗೊಗೊಯ್ ಅವರು ದಶಕಗಳ ಅಯೋಧ್ಯೆ ವಿವಾದಕ್ಕೆ ಅಂತಿಮ ತೀರ್ಪು ನೀಡಿದವರು. 2019ರ ನವೆಂಬರ್ ನಲ್ಲಿ ಅವರು ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾಗಿದ್ದಾರೆ. ನಿವೃತ್ತರಾದ ಬಳಿಕ ಬಿಜೆಪಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿದೆ.


SHARE THIS

Author:

0 التعليقات: