ವಿದೇಶಿ ವಿನಾಶಕಾರಿ ಸಿದ್ದಾಂತದಿಂದ ದೇಶವನ್ನು ಉಳಿಸಬೇಕಾಗಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ: ರೈತರ ಹೋರಾಟಕ್ಕೆ ಜಾಗತಿಕ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಇಂದು ರಾಜ್ಯಸಭೆಯಲ್ಲಿ ಉಲ್ಲೇಖಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿದೇಶಿ ವಿನಾಶಕಾರಿ ಸಿದ್ದಾಂತದಿಂದ ದೇಶವನ್ನು ಉಳಿಸಬೇಕಾಗಿದೆ. ವಿದೇಶದಿಂದ ಬರುವ ಹಾನಿಕಾರಕ ಪ್ರಭಾವಗಳ ವಿರುದ್ಧ ದೇಶವನ್ನು ಎಚ್ಚರಿಸಬೇಕಾಗಿದೆ ಎಂದು ಹೇಳಿದರು.
ಪಾಪ್ ತಾರೆ ರಿಹಾನ್ನಾ ಹಾಗೂ ಹವಾಮಾನ ಬದಲಾವಣೆ ಹೋರಾಟಗಾರ್ತಿ ಗ್ರೇಟಾ ತನ್ ಬರ್ಗ್ ರಂತಹ ಹಲವಾರು ಜಾಗತಿಕ ಪ್ರಸಿದ್ಧ ವ್ಯಕ್ತಿಗಳು ರೈತರ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ವಿದೇಶಿ ವಿನಾಶಕಾರಿ ಸಿದ್ಧಾಂತದ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಮಾತನ್ನು ಹೇಳಿದ್ದಾರೆ. ವಿದೇಶಿ ವಿನಾಶಕಾರಿ ಸಿದ್ದಾಂತವನ್ನು(ಫಾರಿನ್ ಡೆಸ್ಟ್ರಕ್ಟಿವ್ ಐಡಿಯಾಲಜಿ) )ಪ್ರಧಾನಿ ಅವರು ಎಫ್ಡಿಎ ಎಂದು ಕರೆದಿದ್ದಾರೆ.
0 التعليقات: