'ಯಾವ ಭಾರತೀಯನೂ ಈ ದಿನವನ್ನು ಮರೆಯಲು ಸಾಧ್ಯವಿಲ್ಲ' : ಪುಲ್ವಾಮಾ ಸೈನಿಕರಿಗೆ ಮೋದಿ ನಮನ
ಚೆನ್ನೈ: ಎರಡು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ನಡೆದ ಆತಂಕವಾದಿಗಳ ಆಕ್ರಮಣವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೂಯಿಸೈಡ್ ಬಾಂಬಿಂಗ್ನಿಂದಾಗಿ ಪ್ರಾಣ ಕಳೆದುಕೊಂಡ 40 ಯೋಧರಿಗೆ ಪ್ರಧಾನಿ ಗೌರವ ಸಲ್ಲಿಸಿದ್ದಾರೆ.
2019 ರಲ್ಲಿ ಇದೇ ದಿನ (ಫೆಬ್ರವರಿ 14), ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಆತಂಕವಾದಿ ಗುಂಪು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದ ಸಿಆರ್ಪಿಎಫ್ನ ಕಾನ್ವಾಯ್ ಮೇಲೆ ಆಕ್ರಮಣ ನಡೆಸಿತ್ತು. ಒಟ್ಟು 78 ಬಸ್ಸುಗಳಲ್ಲಿ 2,500 ಸಿಆರ್ಪಿಎಫ್ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು. ಹೀಗೆ ಸಾಲಾಗಿ ಹೋಗುತ್ತಿದ್ದ ವಾಹನಗಳಿಗೆ ಸೂಯಿಸೈಡ್ ಬಾಂಬರ್ ಎಕ್ಸ್ಪ್ಲೋಸೀವ್ಸ್ ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ್ದ. ಭಾರತದ 40 ಸೈನಿಕರು ಮರಣ ಹೊಂದಿದ್ದರು.
ಈ ಆಕ್ರಮಣದ ಕೆಲವೇ ದಿನಗಳ ನಂತರ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್ನಲ್ಲಿದ್ದ ಜೈಶ್ ಆತಂಕವಾದಿ ತರಬೇತಿ ಶಿಬಿರಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದ್ದವು.
ಚೆನ್ನೈನಲ್ಲಿ ಭಾನುವಾರ ಭಾರತೀಯ ಸೇನೆಯ ಚೀಫ್ ಜನರಲ್ ಎಂ.ಎಂ.ನರವಣೆ ಅವರಿಗೆ ಭಾರತದಲ್ಲೇ ಅಭಿವೃದ್ಧಿ ಪಡಿಸಿರುವ ಅರ್ಜುನ್ ಮೇನ್ ಬ್ಯಾಟಲ್ ಟ್ಯಾಂಕ್(ಮಾರ್ಕ್ 1ಎ)ಗಳನ್ನು ಹಸ್ತಾಂತರಿಸಿದ ಪ್ರಧಾನಿ ಮೋದಿ, 'ಯಾವ ಭಾರತೀಯನೂ ಈ ದಿನವನ್ನು ಮರೆಯಲಾಗುವುದಿಲ್ಲ. ಎರಡು ವರ್ಷಗಳ ಹಿಂದೆ ಪುಲ್ವಾಮ ಘಟನೆ ನಡೆಯುತು. ನಾವು ಕಳೆದುಕೊಂಡ ಎಲ್ಲ ಹುತಾತ್ಮರಿಗೆ ನಮ್ಮ ನಮನ. ನಮ್ಮ ರಕ್ಷಣಾ ಪಡೆಗಳು ಮತ್ತು ಅವರ ಶೌರ್ಯವು ಸದಾ ಪ್ರೇರಣಾದಾಯಕ' ಎಂದಿದ್ದಾರೆ.
0 التعليقات: