Friday, 26 February 2021

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಝ್ರಾಗೆ ಸಮನ್ಸ್ ನೀಡಿದ ಬಂಗಾಳ ಪೊಲೀಸ್

 

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಝ್ರಾಗೆ ಸಮನ್ಸ್ ನೀಡಿದ ಬಂಗಾಳ ಪೊಲೀಸ್

ಕೋಲ್ಕತಾ: ಪಶ್ಚಿಮಬಂಗಾಳ ಪೊಲೀಸರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಝ್ರಾ ಹಾಗೂ ಬಂಗಾಳ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಉಪಾಧ್ಯಕ್ಷ ಸಂಖುದೇಬ್ ಪಾಂಡಾಗೆ ನೋಟಿಸ್ ಕಳುಹಿಸಿಕೊಟ್ಟಿದ್ದಾರೆ.

ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಬಾಲಕಿಯ ಕುಟುಂಬವನ್ನು ಫೆ.12 ರಂದು ರಾಜ್ಯಪಾಲರ ಬಳಿ ಕರೆದೊಯ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕನಿಗೆ ಸಮನ್ಸ್ ನೀಡಲಾಗಿದೆ.

ಅನುಪಮ್ ಹಝ್ರಾಗೆ ನೋಟಿಸ್ ಕಳುಹಿಸಲಾಗಿದೆ ಎಂದು ಕೋಲ್ಕತಾ ಪೊಲೀಸರು ಹೇಳಿದ್ದಾರೆ. ತಾನು ಈ ತನಕ ಯಾವುದೇ ನೋಟಿಸ್ ನ್ನು ಸ್ವೀಕರಿಸಿಲ್ಲ ಎಂದು ಬಿಜೆಪಿ ನಾಯಕ ಹಝ್ರಾ ಪ್ರತಿಕ್ರಿಯಿಸಿದರು.


SHARE THIS

Author:

0 التعليقات: