Saturday, 6 February 2021

"ಪ್ರಧಾನಿ ಮೋದಿ ನಮ್ಮ ಅಚ್ಚುಮೆಚ್ಚಿನ ಜನಪ್ರಿಯ ನಾಯಕ": ಗುಣಗಾನ ಮಾಡಿದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ


 "ಪ್ರಧಾನಿ ಮೋದಿ ನಮ್ಮ ಅಚ್ಚುಮೆಚ್ಚಿನ ಜನಪ್ರಿಯ ನಾಯಕ": ಗುಣಗಾನ ಮಾಡಿದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ "ನಮ್ಮ ಅತ್ಯಂತ ಜನಪ್ರಿಯ, ಅಚ್ಚುಮೆಚ್ಚಿನ ಹಾಗೂ ದೂರದೃಷ್ಟಿಯುಳ್ಳ ನಾಯಕ" ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎಂ.ಆರ್ ಶಾ ಇಂದು ಗುಜರಾತ್ ಹೈಕೋರ್ಟ್‍ನ ವಜ್ರಮಹೋತ್ಸವ ಸಂದರ್ಭ ಸಂಸ್ಮರಣಾ ಅಂಚೆಚೀಟಿ ಬಿಡುಗಡೆಗೆ ನಡೆದ ವರ್ಚುವಲ್ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

"ಗುಜರಾತ್ ಹೈಕೋರ್ಟ್ 60 ವರ್ಷ ಪೂರೈಸಿದ ಸಂದರ್ಭ ಆಯೋಜಿಸಲಾದ ಈ ಮಹತ್ವದ ಸಮಾರಂಭದಲ್ಲಿ  ಸಂಸ್ಮರಣಾ ಅಂಚೆಚೀಟಿಯನ್ನು ನಮ್ಮ ಅತ್ಯಂತ ಜನಪ್ರಿಯ, ಅಚ್ಚುಮೆಚ್ಚಿನ ಹಾಗೂ ದೂರದೃಷ್ಟಿಯುಳ್ಳ ನಾಯಕ ಸನ್ಮಾನ್ಯ ಪ್ರಧಾನಿ ನರೇಂದ್ರಭಾಯಿ ಮೋದಿ ಬಿಡುಗಡೆಗೊಳಿಸುತ್ತಿರುವ ಸಂದರ್ಭದಲ್ಲಿ ಭಾಗವಹಿಸಲು ನನಗೆ ಹೆಮ್ಮೆಯಾಗಿದೆ ಹಾಗೂ ನನ್ನ  ಸೌಭಾಗ್ಯ" ಎಂದು ತಮ್ಮ ಭಾಷಣದಲ್ಲಿ ಜಸ್ಟಿಸ್ ಶಾ ಹೇಳಿದರು.

ಗುಜರಾತ್ ಹೈಕೋರ್ಟ್ ಅನ್ನು ತಮ್ಮ ಕರ್ಮಭೂಮಿ ಎಂದು ಬಣ್ಣಿಸಿದ ಜಸ್ಟಿಸ್ ಶಾ ನಂತರ ಮಾತನಾಡುತ್ತಾ "ಅಧಿಕಾರದ  ವಿಂಡಣೆ ನಮ್ಮ ಸಂವಿಧಾನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ, ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಈ ಅಧಿಕಾರದ ಹಂಚಿಕೆ. ಈ ಮೂರೂ  ಸಂಸ್ಥೆಗಳು ತಮ್ಮ ಆಯಾಯ ಕಾರ್ಯಕ್ಷೇತ್ರಗಳಲ್ಲಿ  ಕಾರ್ಯಾಚರಿಸಬೇಕೆಂಬುದು ನಿರೀಕ್ಷೆ. ಗುಜರಾತ್ ಹೈಕೋರ್ಟ್ ಯಾವತ್ತೂ  ಈ ಲಕ್ಷ್ಮಣ ರೇಖೆ ದಾಟಿಲ್ಲ ಎಂಬುದಕ್ಕೆ ಹೆಮ್ಮೆಯಿದೆ" ಎಂದರು.

ತಾವು ಈ ಹಿಂದೆ 22 ವರ್ಷ ಪ್ರಾಕ್ಟೀಸ್ ಮಾಡಿದ್ದ ಗುಜರಾತ್ ಹೈಕೋರ್ಟ್ ಯಾವತ್ತೂ ನ್ಯಾಯಾಂಗದ ಸ್ವಾತಂತ್ರ್ಯದ ಪರ ನಿಂತಿದೆ, ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲೂ ಅದು ತನ್ನ ತತ್ವಕ್ಕೆ ಬದ್ಧವಾಗಿತ್ತು ಎಂದು  ಅವರು ಹೇಳಿದರು. ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ 2018ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪತ್ರಕರ್ತರ ಜತೆ ಮಾತನಾಡಿದ್ದ ಜಸ್ಟಿಸ್ ಶಾ ಅವರು ಪ್ರಧಾನಿ ಮೋದಿ ತಮಗೆ ಮಾದರಿ ಹಾಗೂ ತಮ್ಮ ಹೀರೋ ಎಂದಿದ್ದರು.


 


SHARE THIS

Author:

0 التعليقات: