Sunday, 21 February 2021

ಕೇಂದ್ರದ ಕೃಷಿ ಕಾನೂನುಗಳು ರೈತರಿಗೆ 'ಡೆತ್ ವಾರೆಂಟ್' ಆಗಲಿವೆ: ಸಿಎಂ ಕೇಜ್ರಿವಾಲ್


ಕೇಂದ್ರದ ಕೃಷಿ ಕಾನೂನುಗಳು ರೈತರಿಗೆ 'ಡೆತ್ ವಾರೆಂಟ್' ಆಗಲಿವೆ: ಸಿಎಂ ಕೇಜ್ರಿವಾಲ್

ನವದೆಹಲಿ : ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳು ದೇಶದ ರೈತರ ಪಾಲಿಗೆ ಡೆತ್ ವಾರೆಂಟ್ ಆಗಲಿವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಇಂದು (ಫೆ.21) ದೆಹಲಿ ಅಸೆಂಬ್ಲಿಯಲ್ಲಿ ಪಶ್ಚಿಮ ಬಿಹಾರದ ರೈತ ಮುಖಂಡರಿಗೆ ಔತಣ ಕೂಟ ನೀಡಿದ ಸಿಎಂ ಕೃಷಿ ಕಾಯ್ದೆಗಳ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. 'ಒಂದು ವೇಳೆ ಈ ಕಾನುನೂಗಳು ಜಾರಿಗೆ ಬಂದರೆ ಭಾರತದ ಕೃಷಿ ಕೆಲವೇ ಕೆಲವು ಉದ್ಯಮಿಗಳ ಪಾಲಾಗಲಿದೆ. ಇದರಿಂದ ಭಾರತೀಯ ರೈತರ ಬಾಳು ಸರ್ವನಾಶವಾಗಲಿದೆ. ನಮ್ಮ ಅನ್ನದಾತರು ಅವರದೇ ಹೊಲಗಳಲ್ಲಿ ಕೂಲಿ ಕಾರ್ಮಿಕರಾಗುತ್ತಾರೆ' ಎಂದು ಆರೋಪ ಮಾಡಿದ್ದಾರೆ.

ಇದೇ ವೇಳೆ ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿರುವ ಕೇಜ್ರಿವಾಲ್, ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳಲ್ಲಿರುವಂತೆ 23 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಿ ಎಂದು ಆಗ್ರಹಿಸಿದ್ದಾರೆ.

ಇನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಜತ್ ಮಹಾಸಂಘ ನಾಯಕ ರೋಹಿತ್ ಜಕಾರ್, ಕೇಂದ್ರ ಸರ್ಕಾರ ವಿರುದ್ಧ ಗುಡುಗಿದ್ದಾರೆ. ಉತ್ತರ ಪ್ರದೇಶದ ಸರ್ಕಾರ ಘಾಜಿಪುರ್ ಪ್ರತಿಭಟನೆ ಸ್ಥಳಕ್ಕೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸ್ಥಗಿತಗೊಳಿಸಿದೆ. ಆದರೆ, ಕೇಜ್ರಿವಾಲ್ ಸರ್ಕಾರ ನೀರು ಹಾಗೂ ಟಾಯ್ಲೆಟ್ ರೂಂ ಕಲ್ಪಿಸಿದೆ. ನಮ್ಮ ಸಮಸ್ಯೆಗಳ ಕುರಿತು ಮಾತಾಡುವವರಿಗೆ ನಾವು ಬೆಂಬಲ ನೀಡುತ್ತೇನೆ. ಬಿಜೆಪಿ ಸರ್ಕಾರ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಅವರಿಗೆ ನಮ್ಮ ವೋಟ್ ಗಳ ಮೂಲಕ ನಾವು ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.
SHARE THIS

Author:

0 التعليقات: