Thursday, 25 February 2021

ಇಂಧನ ಬೆಲೆ ಏರಿಕೆ ಖಂಡಿಸಿ ಎಲೆಕ್ಟ್ರಿಕ್ ಸ್ಕೂಟರ್ ಏರಿದ ದೀದಿ ಮಮತಾ ಬ್ಯಾನರ್ಜಿ


 ಇಂಧನ ಬೆಲೆ ಏರಿಕೆ ಖಂಡಿಸಿ ಎಲೆಕ್ಟ್ರಿಕ್ ಸ್ಕೂಟರ್ ಏರಿದ ದೀದಿ ಮಮತಾ ಬ್ಯಾನರ್ಜಿ

ಕೋಲ್ಕತ್ತಾ,ಫೆ.25- ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸ್ಕೂಟರ್‍ನಲ್ಲಿ ಸಂಚರಿಸುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದರು. ದೇಶದಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ರಾಜ್ಯ ಕಾರ್ಯದರ್ಶಿ ನಬಣ್ಣಾ ಅವರೊಂದಿಗೆ ಮುಖ್ಯಮಂತ್ರಿಯವರು ಸ್ಕೂಟರ್‍ನಲ್ಲಿ ಕುಳಿತಿದ್ದರು.

ಇದರ ವಿಡಿಯೋ ಈಗ ವೈರಲ್ ಆಗಿದ್ದು, ಸಿಎಂ ಬ್ಯಾನರ್ಜಿ ಅವರು, ಹೆಲ್ಮೆಟ್ ಧರಿಸಿ, ಪೆಟ್ರೋಲ್ ಬೆಲೆ ಏರಿಕೆಯ ಖಂಡಿಸಿದರು. ಪ್ರದರ್ಶನ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು ಸ್ಕೂಟರ್‍ನಲ್ಲಿ ಹಜ್ರಾಮೋರ್‍ನಿಂದ ಐದು ಕಿ.ಮೀ ದೂರದ ಪ್ರಯಾಣ ಮಾಡಿದ್ದಾರೆ.

ರಸ್ತೆಯ ಎರಡೂ ಬದಿಗಳಲ್ಲಿ ನೆರೆದಿದ್ದ ಜನರತ್ತ ಕೈ ಬೀಸುತ್ತಾ. ಕೇಂದ್ರದ ಇಂಧನ ಬೆಲೆ ಏರಿಕೆ ಖಂಡನೆಯ ಫಲಕವನ್ನು ಪ್ರದರ್ಶಿಸಿದ್ದಾರೆ.


SHARE THIS

Author:

0 التعليقات: