ಇಂದಿನಿಂದ 'ಸಬ್ಸಿಡಿ ಅಡುಗೆ ಅನಿಲ ದರ ಏರಿಕೆ'
ನವದೆಹಲಿ : ಎಲ್ ಪಿಜಿ ಸಿಲಿಂಡರ್ ದರ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇಂದಿನಿಂದ (ಗುರುವಾರ) ಹೊಸ ದರ ಅನ್ವಯವಾಗಲಿದೆ. ತೈಲ ಕಂಪನಿಗಳು ಹೊರಡಿಸಿದ ಅಧಿಸೂಚನೆಪ್ರಕಾರ ಈ ಬಾರಿ ಎಲ್ ಪಿಜಿ ಸಿಲಿಂಡರ್ ದರವನ್ನು ಪ್ರತಿ ಯೂನಿಟ್ ಗೆ 25 ರೂ. ವಾಣಿಜ್ಯ ಸಿಲಿಂಡರ್ ಬೆಲೆಗಳನ್ನು ಪ್ರತಿ ಯೂನಿಟ್ ಗೆ 184 ರೂ.ಗೆ ಏರಿಕೆ ಮಾಡಿದೆ.
ಅಡುಗೆ ಅನಿಲ ಸಿಲಿಂಡರ್ ಪರಿಷ್ಕೃತ ದರ ಇಂದಿನಿಂದ ಅಂದರೆ ಫೆಬ್ರವರಿ 4, 2021ರಿಂದ ಜಾರಿಗೆ ಬರಲಿದೆ. ಈಗ ದೆಹಲಿಯಲ್ಲಿ ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬಳಕೆದಾರರು 694 ರೂಪಾಯಿ ಬದಲು 719 ರೂ. ಗ ಲಕ್ನೋದಲ್ಲಿ ಎಲ್ ಪಿಜಿ ಬೆಲೆ 757 ರೂ., ನೋಯ್ಡಾದಲ್ಲಿ ಎಲ್ ಪಿಜಿ ಬೆಲೆ 692 ರೂಪಾಯಿ ಯ ಬದಲು 717 ರೂ. ವಾಣಿಜ್ಯ (19 ಕೆಜಿ) ಎಲ್ ಪಿಜಿ ಸಿಲಿಂಡರ್ ಬೆಲೆ ಈಗ 1533 ರೂಪಾಯಿ ಯ ಬದಲು 1349 ರೂ. ನೀಡಬೇಕಾಗಿದೆ. ಎಲ್ ಪಿಜಿ ಬೆಲೆ ಏರಿಕೆ ನಂತರ ಕೋಲ್ಕತ್ತಾದಲ್ಲಿ ಎಲ್ ಪಿಜಿ ಗ್ಯಾಸ್ ಬೆಲೆ 745.50 ರೂ., ಮುಂಬೈನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 719 ರೂ., ಚೆನ್ನೈನಲ್ಲಿ ಎಲ್ ಪಿಜಿ ಗ್ಯಾಸ್ ದರ 735 ರೂ. ಬೆಂಗಳೂರಿನಲ್ಲಿ ಎಲ್ ಪಿಜಿ ದರ 722 ರೂ., ಚಂಡೀಗಢದಲ್ಲಿ ಎಲ್ ಪಿಜಿ ದರ 728.50 ರೂ., ಹೈದರಾಬಾದ್ ನಲ್ಲಿ ಅಡುಗೆ ಅನಿಲ ಸಿಲಿಂಡರ್ ಬಳಕೆದಾರರು ಪ್ರತಿ ಎಲ್ ಪಿಜಿ ಸಿಲಿಂಡರ್ ಬೆಲೆ 771.50 ರೂ ನೀಡಬೇಕಾಗಿದೆ. ಗುರ್ ಗಾಂವ್ ನಲ್ಲಿ ಎಲ್ ಪಿಜಿ ದರ 728 ರೂ., ಜೈಪುರದಲ್ಲಿ 723 ರೂ. ಪಾಟ್ನಾ ನಿವಾಸಿಗಳು ಸಿಂಗಲ್ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 792.50 ರೂ ಆಗಿದೆ.
ಭಾರತದ ಮೆಟ್ರೋ ನಗರಗಳಲ್ಲಿ ಎಲ್ ಪಿಜಿ ಬೆಲೆ ಹೀಗಿದೆ
ನಗರ Feb 2021 Jan 2021
ನವದೆಹಲಿ ₹ 719.00 ₹ 694.00
ಕೋಲ್ಕತ್ತಾ ₹ 745.50 ₹ 720.50
ಮುಂಬೈ ₹ 694.00
ಚೆನ್ನೈ ₹ 735.00 ₹ 710.00
ಗುರ್ಗಾಂವ್ ₹ 728.00 ₹ 703.00
ನೋಯ್ಡಾ ₹ 717.00 ₹ 692.00
ಬೆಂಗಳೂರು ₹ 722.00 ₹ 697.00
ಭುವನೇಶ್ವರ ₹ 745.50 ₹ 720.50
ಚಂಡೀಗಢ ₹ 728.50 ₹ 703.50
ಹೈದರಾಬಾದ್ ₹ 771.50 ₹ 746.50
ಜೈಪುರ ₹ 723.00 ₹ 698.0
ಲಖನೌ ₹ 757.00 ₹ 732.00
ಪಾಟ್ನಾ ₹ 792.50 ₹ 792.50
ತಿರುವನಂತಪುರ ₹ 728.50 ₹ 703.50
2020ರ ಡಿಸೆಂಬರ್ ನಲ್ಲಿ ತೈಲ ಕಂಪನಿಗಳು ಎಲ್ ಪಿಜಿ ದರವನ್ನು ಎರಡು ಬಾರಿ ಏರಿಸಿದ್ದವು, 2021ರ ಜನವರಿಯಲ್ಲಿ ಎಲ್ ಪಿಜಿ ದರದಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ. ಹೀಗಾಗಿ 2021ರ ಫೆಬ್ರವರಿಯಲ್ಲಿ ತೈಲ ಕಂಪನಿಗಳು ಎಲ್ ಪಿಜಿ ದರ ಏರಿಕೆ ಮಾಡುವ ನಿರೀಕ್ಷೆ ಇತ್ತು. ಇಂಡಿಯನ್ ಆಯಿಲ್ ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿಯಾಗಿದ್ದು, ಎಲ್ ಪಿಜಿ ಪೂರೈಕೆ ಮಾಡುತ್ತದೆ.
0 التعليقات: