ಸರ್ಕಾರದ ನಿಲುವು ಸಮರ್ಥಿಸಿ ಕ್ರಿಕೆಟಿಗರಿಂದ ಟ್ವೀಟ್ : ಕೇಂದ್ರ ವಿರುದ್ಧ ಗುಡುಗಿದ ಶಶಿ ತರೂರ್
ನವದೆಹಲಿ: ರೈತರ ಪ್ರತಿಭಟನೆ ಕುರಿತು ಸರ್ಕಾರದ ನಿಲುವು ಸಮರ್ಥಿಸಿಕೊಂಡು ಕ್ರಿಕೆಟಿಗರು ಟ್ವೀಟ್ ಮಾಡಿರುವ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದು, ಕ್ರಿಕೆಟಿಗರಿಂದ ಟ್ವೀಟ್ ಮಾಡಿಸಿದರೆ, ದೇಶಕ್ಕಾದ ಹಾನಿಗೆ ಪರಿಹಾರವಲ್ಲ ಎಂದು ಹೇಳಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಖ್ಯಾತ ಪಾಪ್ ಗಾಯಕಿ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಖ್ಯಾತನಾಮರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಬಳಿಕ ಕೇಂದ್ರ ಸರ್ಕಾರ ಹೊರಡಿಸಿದ್ದ ಪ್ರಕಟಣೆಯನ್ನು ಬೆಂಬಲಿಸಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿ ಹಲವು ಕ್ರಿಕೆಟಿಗರು ಮತ್ತು ಬಾಲಿವುಡ್ ನಟರು ಟ್ವೀಟ್ ಮಾಡಿದ್ದರು.
ಇದೀಗ ಈ ಕುರಿತು ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದು, 'ಕ್ರಿಕೆಟಿಗರಿಂದ ನಿಮ್ಮ ಪರವಾಗಿ ಟ್ವೀಟ್ ಮಾಡಿಸಿದ ಕೂಡಲೇ ಭಾರತಕ್ಕೆಆದ ಹಾನಿಗೆ ಪರಿಹಾರವಾಗುವುದಿಲ್ಲ. ಭಾರತದ ಗಣ್ಯರ ಟ್ವೀಟ್ ಗಳು ಸರ್ಕಾರದ ನಡೆಯು ಮುಜುಗರ ಸೃಷ್ಟಿಸುತ್ತಿದೆ. ವಿಶ್ವದಲ್ಲಿ ಭಾರತಕ್ಕೆ ಇರುವ ಮನ್ನಣೆಗೆ ನೀವು ಮಾಡಿರುವ ಹಾನಿಗೆ ಕ್ರಿಕೆಟರ್ ಗಳ ಅಥವಾ ಸೆಲೆಬ್ರಿಟಿಗಳು ಮಾಡುವ ಟ್ವೀಟ್ ಗಳು ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ.
0 التعليقات: