ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ : ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ
ಬೆಂಗಳೂರು : ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಇಂದು ಚಿನ್ನದ ಚಿನ್ನದ ಬೆಲೆಯಲ್ಲಿ 550 ರೂ. ಇಳಿಕೆ ಕಂಡಿದೆ. ಈ ಮೂಲಕ ಇಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 42,700 ರೂ. ಆಗಿದೆ.
ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 600 ರೂಪಾಯಿಯಷ್ಟು ಇಳಿಕೆ ಕಂಡಿದೆ. ಈ ಮೂಲಕ 46,580 ರೂ. ಆಗಿದೆ. ಇನ್ನು ಬೆಳ್ಳಿ ದರದಲ್ಲೂ ಇಳಿಕೆ ಕಂಡಿದ್ದು, ನಿನ್ನೆ 1 ಕೆಜಿ ಬೆಳ್ಳಿದರ 70,600 ರೂ. ಗೆ ಮಾರಾಟವಾಗಿತ್ತು. ಇಂದು 69,600 ರೂ.ಗೆ ಇಳಿದಿದೆ.
ಕೊರೊನಾ ಸಮಯದಲ್ಲಿ ಏರಿಕೆಯಾಗಿದ್ದ ಚಿನ್ನದ ದರ ಇಳಿಕೆಯತ್ತ ಸಾಗಿದ್ದು, ಸತತ ಎರಡು ದಿನಗಳ ಕಾಲ ಚಿನ್ನದ ದರ ಕುಸಿಯುತ್ತಿದೆ. ಚಿನ್ನದ ದರದಲ್ಲಿ ಇಳಿಕೆಯಾಗುತ್ತಿರುವುದರಿಂದ ಗ್ರಾಹಕರಿಗೆ ಖುಷಿ ತಂದಿದೆ.
0 التعليقات: