Sunday, 14 February 2021

ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಕೇಂದ್ರ ಮಂತ್ರಿ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆ

 

ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಕೇಂದ್ರ ಮಂತ್ರಿ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆ

ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆ

ಬೆಂಗಳೂರು: ಯಾರಿಗೆ ಸೌಲಭ್ಯ ಸಿಗಬೇಕೋ ಅವರನ್ನ ಗುರುತಿಸಿ ಕೊಡುವ ಕೆಲಸ ಆಗಬೇಕಿದೆ. ಇಂದು ಎಲ್ಲರೂ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ ಸದಾನಂದಗೌಡ ಅವರು ಸೋಮವಾರ ಹೇಳಿದ್ದಾರೆ.

ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದರ ಮೆರಿಟ್ಸ್ ಯಾವುದು ಅನ್ನೋದು ಒಟ್ಟಾರೆ ಹೇಳಿಕೆ ಇರಬಹುದು. ಇಂದು ಕಾರ್ಮಿಕ ತನ್ನ ಕೆಲಸಕ್ಕೆ ಹೋಗಲು ಅನುಕೂಲಕ್ಕಾಗಿ ಬೈಕ್ ಕೊಂಡಿರಬಹುದು. ಇದು ಕಡಿಮೆ ದರ್ಜೆಯ ಬೈಕ್ ಸಹ ಆಗಿಬಹುದು. ಇಂದು ಟಿವಿ ಇಲ್ಲದ ಮನೆ ಇಲ್ಲ, ಎಲ್ಲರ ಮನೆಯಲ್ಲೂ ಟಿವಿ ಇದೆ. ಇದರ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇದನ್ನೆಲ್ಲಾ ಪರಿಶೀಲಿಸಿ ವಿಸ್ತೃತ ಚರ್ಚೆ ಆಗಬೇಕು ಎಂದು ಉಮೇಶ್ ಕತ್ತಿಗೆ ಸಲಹೆ ನೀಡಿದ್ದಾರೆ.

ಲಿಂಗಾಯತ ಒಳಪಂಗಡ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ರಾಜಕೀಯ ಪ್ರೇರಿತವಾದ ಹೋರಾಟವಾಗಿದೆ. ಇಂದು ಆರ್ಥಿಕತೆ ಆಧರಿಸಿ ಮೀಸಲಾತಿ ನೀಡಬೇಕು. ಇದು ಸಮಾಜಕ್ಕೆ ಆಡಳಿತಕ್ಕೆ ತೊಂದರೆ ಮಾಡುವ ಹೋರಾಟವಾಗಿದೆ. ನಾವು ಈ ಬಗ್ಗೆ ಲಾಜಿಕಲ್ ಎಂಡ್ ಮಾಡಿದ್ದೇವೆ. ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಅವರಿಗೆ ಮುಂದಿನ ದಿನಗಳಲ್ಲಿ ಮೀಸಲಾತಿ ಸಿಗಬೇಕು. ಅದು ಬಿಟ್ಟು ಈ ರೀತಿಯ ರಾಜಕೀಯ ಪ್ರೇರಿತ ಮೀಸಲಾತಿ ಯಾವ ಸಮಾಜಕ್ಕೂ ಒಳ್ಳೆಯದಲ್ಲ. ಇಂದು ಎಲ್ಲರಿಗೂ ಮೀಸಲಾತಿ ಬೇಕು ಅನ್ನೋದು ಸರಿಯಲ್ಲ ಎಂದು ಸದಾನಂದಗೌಡ ಅವರು ಮೀಸಲಾತಿ ಹೋರಾಟದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


SHARE THIS

Author:

0 التعليقات: