Monday, 22 February 2021

ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ!


ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ!


ಪುದುಚೇರಿ: ಪುದುಚೇರಿ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಿದ್ದು, ಬಹುಮತ ಸಾಬೀತು ಮಾಡಲಾಗದೇ ವಿ. ನಾರಾಯಣಸಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಭಾನುವಾರ ಇಬ್ಬರು ಶಾಸಕರು ಕಾಂಗ್ರೆಸ್ನಿಂದ ಹೊರ ನಡೆದಿದ್ದರು. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಬಹುಮತ 12ಕ್ಕೆ ಕುಸಿದಿದೆ. ಬಹುಮತ ಸಾಬೀತಿಗೆ 14 ಸ್ಥಾನಗಳ ಅವಶ್ಯಕತೆ ಇರುವುದರಿಂದ ಇಂದು ನಡೆದ ವಿಶ್ವಾಸ ಮತಯಾಚನೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ನಾರಾಯಣಸಾಮಿ ವಿಫಲರಾಗಿರುವುದರಿಂದ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.SHARE THIS

Author:

0 التعليقات: