Thursday, 18 February 2021

ನಾಸಾದ ರೋವರ್ ಮಂಗಳ ಯಾನ ಯಶಸ್ವಿ: ಯೋಜನೆ ನೇತೃತ್ವ ವಹಿಸಿದ್ದು ಭಾರತ ಮೂಲದ ಮಹಿಳೆ


ನಾಸಾದ ರೋವರ್ ಮಂಗಳ ಯಾನ ಯಶಸ್ವಿ: ಯೋಜನೆ ನೇತೃತ್ವ ವಹಿಸಿದ್ದು ಭಾರತ ಮೂಲದ ಮಹಿಳೆ


ವಾಷಿಂಗ್ಟನ್, ಫೆಬ್ರವರಿ 19: ಸುಮಾರು 203 ದಿನಗಳ ಬಾಹ್ಯಾಕಾಶ ಪ್ರಯಾಣದ ಬಳಿಕ ನಾಸಾದ ಅತಿ ದೊಡ್ಡ ಮತ್ತು ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್, ಮಂಗಳ ಗ್ರಹದ ಅಂಗಳದ ಮೇಲೆ ಗುರುವಾರ ಸುಗಮವಾಗಿ ಇಳಿದಿದೆ. ಮಂಗಳದಲ್ಲಿ ಜೀವಿಗಳ ಅಸ್ತಿತ್ವದ ಬಗ್ಗೆ ಮಹತ್ವದ ಅಧ್ಯಯನ ಮಾಡಲು ತೆರಳಿರುವ ಈ ನೌಕೆಯು ಸುಗಮವಾಗಿ ಗ್ರಹದ ಮೇಲೆ ಇಳಿಯುತ್ತದೆಯೇ ಎಂಬುದು ಕುತೂಹಲ ಮೂಡಿಸಿತ್ತು.

ಪರ್ಸೆವರೆನ್ಸ್ ರೋವರ್ 203 ದಿನಗಳ ಕಾಲ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು ದೂರ ಸಾಗಿ, ಮಂಗಳ ಗ್ರಹದ ಮೇಲೆ ಇಳಿದಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 3.55ರ ವೇಳೆಗೆ ನಾಸಾ ರೋವರ್ ಗ್ರಹದ ಮೇಲ್ಮೈ ಸ್ಪರ್ಶಿದ ಸಂದರ್ಭವನ್ನು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಡ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಮೂಲಕ ಈ ಸನ್ನಿವೇಶ ಪ್ರಕ್ರಿಯೆಯನ್ನು ಖಚಿತಪಡಿಸಲಾಯಿತು.

11 ವರ್ಷದ ಶ್ರಮ, $20 ಸಾವಿರ ಕೋಟಿ, ಒಂದೇ ಯೋಜನೆ..!

ವಿಶೇಷವೆಂದರೆ ಈ ಅಭೂತಪೂರ್ವ ಯೋಜನೆಯ ನೇತೃತ್ವ ವಹಿಸಿದ್ದು ಭಾರತ ಮೂಲದ ಅಮೆರಿಕನ್ ವಿಜ್ಞಾನಿ ಡಾ. ಸ್ವಾತಿ ಮೋಹನ್. 'ನೆಲಸ್ಪರ್ಶ ಖಚಿತವಾಗಿದೆ' ಎಂದು ಕಾರ್ಯಾಚರಣೆ ಮುಖ್ಯಸ್ಥೆ ಸ್ವಾತಿ ಮೋಹನ್ ಅಧಿಕೃತವಾಗಿ ಘೋಷಿಸುತ್ತಿದ್ದಂತೆಯೇ ಕ್ಯಾಬೊರೇಟರಿಯಲ್ಲಿ ಹರ್ಷೋದ್ಗಾರ ಮುಗಿಲುಮುಟ್ಟಿತು. ಮುಂದೆ ಓದಿ.

ಅಮೆರಿಕನ್ನರ ಜಾಣ್ಮೆ ಎಂದ ಬೈಡನ್

ಈ ಸ್ವಾಯತ್ತ ಮಾರ್ಗದರ್ಶಿ ಯೋಜನೆಯು ಉದ್ದೇಶಿತ ಸಮಯಕ್ಕಿಂತ 11 ನಿಮಿಷ ಮೊದಲೇ ಪೂರ್ಣಗೊಂಡಿದ್ದು, ಭೂಮಿಗೆ ರೇಡಿಯೋ ಸಂಕೇತಗಳನ್ನು ರವಾನಿಸಿದೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಈ ಯೋಜನೆಯ ಯಶಸ್ಸನ್ನು ಐತಿಹಾಸಿಕ ಎಂದು ಕೊಂಡಾಡಿದ್ದಾರೆ. 'ವಿಜ್ಞಾನದ ಶಕ್ತಿ ಮತ್ತು ಅಮೆರಿಕದ ಜಾಣ್ಮೆಯ ಮುಂದೆ ಈ ಲೋಕದಲ್ಲಿ ಸಾಧ್ಯತೆಗಳಾಚೆ ಯಾವುದೂ ಇಲ್ಲ ಎನ್ನುವುದು ಇಂದು ಮತ್ತೆ ಸಾಬೀತಾಗಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಲ್ಲೇನು ಮಾಡಲಿದೆ ರೋವರ್?

ಪರ್ಸೆವೆರೆನ್ಸ್ ರೋವರ್ ನೌಕೆಯು ಸುಮಾರು ಏಳು ವರ್ಷ ಮಂಗಳನ ಅಂಗಳದಲ್ಲಿ ಓಡಾಟ ನಡೆಸಲಿದೆ. ಜತೆಗೆ 30 ಕಲ್ಲುಗಳು ಹಾಗೂ ಮಣ್ಣಿನ ಮಾದರಿಗಳನ್ನು ಮುಚ್ಚಿದ ಟ್ಯೂಬ್‌ಗಳೊಳಗೆ ಸಂಗ್ರಹಿಸಿ 2030ರ ವೇಳೆಗೆ ಭೂಮಿಗೆ ಕಳುಹಿಸಲಿದೆ. ಇದನ್ನು ಲ್ಯಾಬ್ ವಿಶ್ಲೇಷಣೆ ನಡೆಸಲಿದೆ. ಜತೆಗೆ ಅಲ್ಲಿನ ಜೀವಿಗಳ ಅಸ್ತಿತ್ವದ ಬಗ್ಗೆ ಮಹತ್ವದ ಸುಳಿವು ನೀಡಬಲ್ಲ ವಿವಿಧ ಚಿತ್ರ ಹಾಗೂ ಸಂಕೇತಗಳನ್ನು ರವಾನಿಸಲಿದೆ.

ಮಂಗಳ ಗ್ರಹಕ್ಕೂ ಲಗ್ಗೆ ಇಟ್ಟ ಚೀನಾ, 'ಟಿಯಾನ್ವೆನ್-1' ಯಶಸ್ವಿ ಕಾರ್ಯಾಚರಣೆ

ಒಂದು ಟನ್ ತೂಕದ ಬೃಹತ್ ನೌಕೆ

ಎಸ್‌ಯುವಿ ಗಾತ್ರದ ನೌಕೆಯು ಸುಮಾರು ಒಂದು ಟನ್ ತೂಕವಿದೆ. ಇದರಲ್ಲಿ ಏಳು ಅಡಿ ಎತ್ತರದ ರೊಬೊಟಿಕ್ ಕ್ಯಾಮೆರಾ, 19 ಕ್ಯಾಮೆರಾಗಳು, ಎರಡು ಮೈಕ್ರೋಫೋನ್‌ಗಳು ಮತ್ತು ತನ್ನ ವೈಜ್ಞಾನಿಕ ಗುರಿಗಳಿಗೆ ನೆರವಾಗಲು ಹರಿತವಾದ ಸಾಧನಗಳನ್ನು ಅಳವಡಿಸಲಾಗಿದೆ.

ಎರಡು ಚಿತ್ರಗಳ ರವಾನೆ

ಪರ್ಸೆವೆರೆನ್ಸ್ ಇದುವರೆಗೂ ನಾಸಾ ರವಾನಿಸಿದ ಅತ್ಯಂತ ದೊಡ್ಡ ಹಾಗೂ ಅತಿ ಆಧುನಿಕ ರೋವರ್ ಆಗಿದೆ. ಮಂಗಳ ಗ್ರಹಕ್ಕೆ ಕಾಲಿಟ್ಟ ಕೂಡಲೇ ಅದು ಅಲ್ಲಿನ ಎರಡು ಚಿತ್ರಗಳನ್ನು ಭೂಮಿಗೆ ರವಾನಿಸಿದೆ. ನೌಕೆಯು ಮಂಗಳನ ಮೇಲೆ ಇಳಿಯುವ ಕೊನೆಯ ಏಳು ನಿಮಿಷ ಅತ್ಯಂತ ಚಡಪಡಿಕೆಯ ಸನ್ನಿವೇಶ ಸೃಷ್ಟಿಸಿತ್ತು. 'ಏಳು ನಿಮಿಷಗಳ ಭಯಾನಕ ಸ್ಥಿತಿ' ಎಂದೇ ಕರೆಯಲಾಗುವ ಈ ಸಂದರ್ಭವನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಲಾಯಿತು. ಮಂಗಳ ಗ್ರಹದಲ್ಲಿ ನೌಕೆಯನ್ನು ಇಳಿಸುವುದು ತೀರಾ ಸವಾಲಿನದ್ದಾಗಿದ್ದು, ಇದುವರೆಗೂ ಶೇ 50ರಷ್ಟು ಯೋಜನೆಗಳು ವಿಫಲವಾಗಿವೆ.

ಅರಬ್ಬರ ಮಹತ್ವದ ಸಾಧನೆ, ಮಂಗಳನ ಫೋಟೋ ಕಳಿಸಿದ 'ಹೋಪ್'SHARE THIS

Author:

0 التعليقات: