ಪತ್ನಿಯನ್ನು ಕೊಂದು ಮನೆಯೊಳಕ್ಕೇ ಸುಟ್ಟುಹಾಕಿದ ಮಾಜಿ ಕಾರ್ಪೋರೇಟರ್ ಅಪ್ಪ!
ಡೊಂಬಿವಾಲಿ (ಮಹಾರಾಷ್ಟ್ರ): ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಜತೆ ಜಗಳವಾಡಿ, ಅವರನ್ನು ಕೊಂದು ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಮನೆಯ ಒಳಗೇ ಸುಟ್ಟುಹಾಕಿರುವ ಘಟನೆ ಮಹಾರಾಷ್ಟ್ರದ ಡೊಂಬಿವಾಲಿಯ ಮನ್ಪಾಡಾದಲ್ಲಿ ನಡೆದಿದೆ.
ಮಾಜಿ ಕಾರ್ಪೊರೇಟರ್ ರಮಾಕಾಂತ್ ಪಾಟೀಲ್ ಅವರ ತಂದೆ ಬಲಿರಾಮ್ ಪಾಟೀಲ್ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಇವರಿಗೆ 84 ವರ್ಷವಾಗಿದ್ದು, 80 ವರ್ಷದ ತಮ್ಮ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಹುನ್ನಾರ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ.
ಡೊಂಬಿವಾಲಿಯ ಪಾಂಡುರಾಂಗ್ ವಾಡಿ ಪ್ರದೇಶದ ಪಾಟೀಲ್ ಕುಟುಂಬದ ಒಡೆತನದ ಬಂಗಲೆಯಲ್ಲಿ ಈ ಕೃತ್ಯ ನಡೆದಿದೆ. ಕಳೆದ ಶನಿವಾರ ಈ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ರಾಮಕಾಂತ್ ಅವರ ಪತ್ನಿ ಮಲಗುವ ಕೋಣೆಯಿಂದ ಹೊರಕ್ಕೆ ಬಂದಾಗಲೇ ವಿಷಯ ತಿಳಿದಿದೆ. ಅವರು ಪತಿಗೆ ವಿಷಯ ತಿಳಿಸಿದ್ದಾರೆ.
ರಮಾಕಾಂತ್ ಪಾಟೀಲ್ ಸ್ಥಳಕ್ಕೆ ಬಂದಾಗ ತಾಯಿಯ ಮೃತದೇಹ ಅರ್ಧಂಬರ್ಧ ಸುಟ್ಟಿರುವುದು ಕಂಡುಬಂದಿದೆ. ಆದರೆ ತಂದೆ ಎಲ್ಲಿಯೋ ಓಡಿಹೋಗಿರುವುದು ತಿಳಿದಿದೆ. ನಂತರ ಅವರು ಪೊಲೀಸ್ ಠಾಣೆಮೆ ಮಾಹಿತಿ ನೀಡಿದ್ದಾರೆ.
ತಮ್ಮ ತಂದೆ ಬಲಿರಾಮ್ ತುಂಬಾ ಸ್ವಭಾವದವರಾಗಿದ್ದು, ಅವರ ಪತ್ನಿ ಪಾರ್ವತಿಯೊಂದಿಗೆ ನಿಯಮಿತವಾಗಿ ವಾಗ್ವಾದಕ್ಕೆ ಇಳಿಯುತ್ತಿದ್ದರು. ಆದರೆ ಕೊಲ್ಲುವ ಈ ಹಂತಕ್ಕೆ ತಲುಪುತ್ತದೆ ಎಂದು ಅವರು ಎಂದಿಗೂ ಯೋಚಿಸಿರಲಿಲ್ಲ ಎಂದು ರಮಾಕಾಂತ್ ಹೇಳಿದ್ದಾರೆ.
ಮನ್ಪಾಡಾ ಪೊಲೀಸರು ಬಲಿರಾಮ್ ಅವರನ್ನು ಹುಡುವಲ್ಲಿ ಯಶಸ್ವಿಯಾಗಿದ್ದು ಬಂಧಿಸಿದ್ದಾಗ ಜಗಳವಾಗಿರು ವಿಷಯ ಬಾಯಿ ಬಿಟ್ಟಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 التعليقات: