Friday, 5 February 2021

ರಿಹಾನ್ನಾ ಬಳಿಕ ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಿದ ಹಾಲಿವುಡ್‌ ತಾರೆ ಸೂಸನ್‌


 ರಿಹಾನ್ನಾ ಬಳಿಕ ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಿದ ಹಾಲಿವುಡ್‌ ತಾರೆ ಸೂಸನ್‌

ಹೊಸದಿಲ್ಲಿ: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತಾರಾಷ್ಟ್ರೀಯ ತಾರೆ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್‌ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಹಾಲಿವುಡ್‌ ನ ಖ್ಯಾತ ನಟಿ ಸೂಸನ್‌ ಸ್ಯಾರಂಡನ್‌ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ಅವರ ಟ್ವೀಟ್‌ ಗೆ 22,000ಕ್ಕೂ ಹೆಚ್ಚಿನ ಲೈಕ್‌ ಗಳು ಬಂದಿವೆ.

ಖ್ಯಾತ ಸಿನಿಮಾಗಳಾದ ಸ್ಟೆಪ್‌ ಮಾಮ್‌, ತೇಲ್ಮಾ ಆಂಡ್‌ ಲೂಯಿಸ್‌ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸೂಸನ್‌ ನಟಿಸಿದ್ದಾರೆ. "ಪ್ರತಿಭಟನೆ ನಡೆಸುತ್ತಿರುವ ಭಾರತೀಯ ರೈತರೊಂದಿಗೆ ನಾನು ನಿಲ್ಲುತ್ತೇನೆ" ಎಂದು ಅವರು ಟ್ವೀಟ್‌ ಮಾಡಿದ್ದು, ಜೊತೆಗೆ ರೈತರ ಪ್ರತಿಭಟನೆಯ ಕುರಿತು ಎಲ್ಲ ಮಾಹಿತಿಯಿರುವ ನ್ಯೂಯಾರ್ಕ್‌ ಟೈಮ್ಸ್‌ ನ ಸುದ್ದಿಯನ್ನೂ ಶೇರ್‌ ಮಾಡಿದ್ದಾರೆ. 

ರೈತರನ್ನು ಬೆಂಬಲಿಸಿ ಖ್ಯಾತ ಪಾಪ್‌ ಗಾಯಕಿ ರಿಹಾನ್ನಾ ಮಾಡಿದ ಟ್ವೀಟ್‌ ವಿಶ್ವಾದ್ಯಂತ ಸುದ್ದಿಯಾಗಿ, ಪ್ರತಿಭಟನೆಯು ಹಲವರ ಗಮನ ಸೆಳೆಯುವಂತೆ ಮಾಡಿತ್ತು. ಈ ವೇಳೆ ಕೇಂದ್ರ ಸರಕಾರದ ಪರವಾಗಿ ಹಲವಾರು ಭಾರತೀಯ ಸಲೆಬ್ರಿಟಿಗಳು ಟ್ವೀಟ್‌ ಮಾಡಿದ್ದರು. SHARE THIS

Author:

0 التعليقات: