Thursday, 4 February 2021

ಬಿಹಾರದಲ್ಲಿ ಬೆಳೆಯಲಾಗುತ್ತಿದೆ ವಿಶ್ವದ ಅತ್ಯಂತ ದುಬಾರಿ ತರಕಾರಿ!


ಬಿಹಾರದಲ್ಲಿ ಬೆಳೆಯಲಾಗುತ್ತಿದೆ ವಿಶ್ವದ ಅತ್ಯಂತ ದುಬಾರಿ ತರಕಾರಿ!

ಪಾಟ್ನಾ: ಬಿಹಾರದಲ್ಲಿ ವಿಶ್ವದ ಅತ್ಯಂತ ದುಬಾರಿ ತರಕಾರಿಗಳಾದ 'ಹಾಪ್-ಚಿಗುರು' ಅನ್ನು ಪ್ರಾಯೋಗಿಕವಾಗಿ ಬೆಳೆಯಲಾಗುತ್ತಿದ್ದು, ಈ ತರಕಾರಿ ಬೆಲೆ ಒಂದು ಕೆಜಿ ಸುಮಾರು 1 ಲಕ್ಷ ರೂಪಾಯಿ!

2012ರಲ್ಲಿ ಹಜಾರಿಬಾಗ್‌ನ ಸೇಂಟ್ ಕೊಲಂಬಸ್ ಕಾಲೇಜಿನಿಂದ ಇಂಟರ್ಮೀಡಿಯೆಟ್-ಪಾಸ್, ಬಿಹಾರದ ಔರಂಗಾಬಾದ್ ಜಿಲ್ಲೆಯ ನವೀನಗರ ಬ್ಲಾಕ್‌ನ ಕರಮ್ದಿಹ್ ಗ್ರಾಮದ ರೈತ ಅಮರೇಶ್ ಸಿಂಗ್(38) ಅವರು ತಮ್ಮ ಭೂಮಿಯಲ್ಲಿ ಪ್ರಾಯೋಗಿಕವಾಗಿ ಹಾಪ್-ಚಿಗುರು ಕೃಷಿ ಆರಂಭಿಸಿದ ಮೊದಲ ವ್ಯಕ್ತಿ.

ಆರು ವರ್ಷಗಳ ಹಿಂದೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈ ತರಕಾರಿಗೆ ಒಂದು ಕೆಜಿಗೆ ಸರಿಸುಮಾರು 1 ಲಕ್ಷ ರೂ. ಇತ್ತು. ಈ ಬೆಳೆ ಭಾರತೀಯ ಮಾರುಕಟ್ಟೆಯಲ್ಲಿ ವಿರಳವಾಗಿ ಕಂಡುಬರುತ್ತದೆ ಮತ್ತು ವಿಶೇಷ ಆರ್ಡರ್ ಮೂಲಕ ಮಾತ್ರ ಈ ತರಕಾರಿ ಖರೀದಿಸಲಾಗುತ್ತದೆ.

"ಹಾಪ್-ಚಿಗುರು ಕೃಷಿ ಶೇ. 60 ರಷ್ಟು ಯಶಸ್ವಿಯಾಗಿ ನಡೆದಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ" ಎಂದು ಅಮರೇಶ್ ಸಿಂಗ್ ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 'ಹಾಪ್-ಚಿಗುರು'ಗಳ ಕೃಷಿಯನ್ನು ಉತ್ತೇಜಿಸಲು ವಿಶೇಷ ವ್ಯವಸ್ಥೆಯನ್ನು ಮಾಡಿದರೆ, ಅದು ಒಂದೆರಡು ವರ್ಷಗಳಲ್ಲಿ ರೈತರು ಇತರ ಕೃಷಿ ವಿಧಾನಗಳಿಂದ ಬರುವ ಲಾಭಕ್ಕಿಂತ 10 ಪಟ್ಟು ಹೆಚ್ಚು ಗಳಿಸುವಂತಾಗುತ್ತದೆ ಎಂದು ಅವರು ಹೇಳಿದ್ದಾರೆ.SHARE THIS

Author:

0 التعليقات: