Wednesday, 3 February 2021

ಯಡಿಯೂರಪ್ಪ ಸರ್ಕಾರ ಟೇಕಾಫ್ ಅಲ್ಲ, ಆಫೇ ಆಗಿಬಿಟ್ಟಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ


ಯಡಿಯೂರಪ್ಪ ಸರ್ಕಾರ ಟೇಕಾಫ್ ಅಲ್ಲ, ಆಫೇ ಆಗಿಬಿಟ್ಟಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ


ಬೆಂಗಳೂರು: ಯಡಿಯೂರಪ್ಪ ಸರ್ಕಾರ ಟೇಕಾಫ್ ಅಲ್ಲ, ಆಫೇ ಆಗಿಬಿಟ್ಟಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಡಳಿತ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ಅವರು ಇಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ‌ ನಿರ್ಣಯ ಪ್ರಸ್ತಾವದ ಕುರಿತು ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತ ವೇಳೇಯಲ್ಲಿ ಅವರು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.


ಇದೇ ವೇಳೆ ಅವರು ಮಾತನಾಡುತ್ತ, ಅಧಿವೇಶನದ ಭಾಷಣದಲ್ಲಿ ಮುನ್ನೋಟವೂ ಇಲ್ಲ, ಹಿನ್ನೋಟವೂ ಇಲ್ಲ ಅಂತ ಹೇಳಿದರು. ರಾಜ್ಯಪಾಲರ ಬಳಿ ಸುಳ್ಳನ್ನು ಹೇಳಿಸಲಾಗಿದೆ ಅಂತ ಹೇಳಿದ ಅವರು ಮಿಸ್ಟರ್ ಯಡಿಯೂರಪ್ಪ. ಪಾಪದ ಹಣ ಖರ್ಚು ಮಾಡಿ, ಶಾಸಕರನ್ನು ಕಾಂಗ್ರೆಸ್ , ಜೆಡಿಎಸ್​ನಿಂದ ಕರೆದುಕೊಂಡ ಬಂದಿದ್ದಾರೆ ಅಂತ ಹೇಳಿದರು.



SHARE THIS

Author:

0 التعليقات: