Monday, 22 February 2021

ಸಂಸದ ಶವವಾಗಿ ಪತ್ತೆ ; ಆತ್ಮಹತ್ಯೆ ಶಂಕೆ


ಸಂಸದ ಶವವಾಗಿ ಪತ್ತೆ ; ಆತ್ಮಹತ್ಯೆ ಶಂಕೆ


ಮಹಾರಾಷ್ಟ್ರ: ಮುಂಬೈನ ಮೆರೈನ್ ಡ್ರೈವ್‌ನಲ್ಲಿರುವ ಹೋಟೆಲೊಂದರಲ್ಲಿ ದಾದ್ರಾ ಮತ್ತು ನಗರ ಹವೇಲಿಯ ಏಳು ಬಾರಿಯ ಸಂಸದ ಮೋಹನ್ ಡೆಲ್ಕರ್ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಮರೀನ್ ಡ್ರೈವ್ ಹೋಟೆಲ್‌ನಲ್ಲಿ ಮೋಹನ್ ಡೆಲ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮಾಧ್ಯಮಗಳಿಂದ ದೊರೆತ ಮಾಹಿತಿ ಪ್ರಕಾರ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

58 ವರ್ಷದ ಡೆಲ್ಕರ್ ಅವರು ಸಂಸತ್ತಿನ ಸ್ವತಂತ್ರ ಸದಸ್ಯರಾಗಿದ್ದರು. ಮೋಹನ್ ಡೆಲ್ಕರ್ ಅವರು 2019 ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದಿದ್ದರು. ಕಳೆದ ವರ್ಷ, ಮೋಹನ್ ಡೆಲ್ಕರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗಿನ ಭೇಟಿಯ ನಂತರ ದಾದ್ರಾ ಮತ್ತು ನಗರ ಹವೇಲಿಯಲ್ಲಿ ನಡೆದ ಸ್ಥಳೀಯ ಚುನಾವಣೆಗೆ ಜೆಡಿಯು ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಜೆಡಿಯುಗೆ ಅವರು ನೀಡಿದ ಬೆಂಬಲದಿಂದಾಗಿ ದಾದ್ರಾ ಮತ್ತು ನಗರ ಹವೇಲಿಯಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹಲವು ಸ್ಥಾನಗಳು ನಷ್ಟವಾಗಿತ್ತು.SHARE THIS

Author:

0 التعليقات: