ಒಲಿಂಪಿಕ್ಸ್ ನಡೆಯುವುದು ಖಚಿತ: ಜಪಾನ್ ಪ್ರಧಾನಿ
ಟೋಕಿಯೊ: ದೇಶದಲ್ಲಿ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳ ನಡುವೆಯೂ ಈ ವರ್ಷ ಒಲಿಂಪಿಕ್ಸ್ ಆಯೋಜಿಸುವ ದೃಢಸಂಕಲ್ಪ ಹೊಂದಿರುವುದಾಗಿ ಜಪಾನ್ ಪ್ರಧಾನಿ ಯೋ ಶಿಹಿದೆ ಸುಗಾ ಹೇಳಿದ್ದಾರೆ.
ಟೋಕಿಯೊದಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವರ್ಚುವಲ್ ಸಭೆಯೊಂದರಲ್ಲಿ ಮಾತನಾಡಿದ ಅವರು, ಜಾಗತಿಕ ಒಗ್ಗಟ್ಟು ಹಾಗೂ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಮಾನವನ ವಿಜಯದ ಸಂಕೇತವಾಗಿ ಈ ವರ್ಷದ ಬೇಸಿಗೆಯಲ್ಲಿ ಟೋಕಿಯೊ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಆಯೋಜಿಸುವ ದೃಢಸಂಕಲ್ಪವನ್ನು ನಾವು ಮಾಡಿದ್ದೇವೆ.
0 التعليقات: