"ಸಿದ್ದರಾಮಯ್ಯನವರ ಹೇಳಿಕೆ ಸುಪ್ರೀಂ ಆದೇಶಕ್ಕೆ ವಿರುದ್ಧವಾದದ್ದು" : ಸಿಎಂ
ಶಿವಮೊಗ್ಗ, ಫೆ.17- ರಾಮಮಂದಿರವನ್ನು ಬೇರೆಡೆ ನಿರ್ಮಿಸಲು ದೇಣಿಗೆ ನೀಡುತ್ತೇನೆ ಎಂಬ ವಿಪಕ್ಷ ನಾಯಕರ ಹೇಳಿಕೆ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧ ವಾದದ್ದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಮಾಚೇನಹಳ್ಳಿ ಕೈಗಾರಿಕೆ ಗಳ ಸಂಘದ ರಜತ ಮಹೋತ್ಸವ ಕಟ್ಟಡ ದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಯಾರನ್ನೂ ಒತ್ತಾಯ ಮಾಡುತ್ತಿಲ್ಲ. ಜನರೇ ಜಾತಿ ಧರ್ಮ ಭೇದ ವಿಲ್ಲದೆ ನೀಡುತ್ತಿದ್ದಾರೆ.
ಹೀಗಿರುವಾಗ ಇದರ ಬಗ್ಗೆ ಸಲ್ಲದ ಹೇಳಿಕೆ ನೀಡುವ ಮೂಲಕ ಕಲ್ಲು ಹಾಕಿ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಸಲಹೆ ನೀಡಿದರು. ರಾಮ ಮಂದಿರದ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು ರಾಜ್ಯ, ದೇಶ ಮತ್ತು ನಿಮಗೂ ಒಳ್ಳೆಯದಲ್ಲವೆಂದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಪರೋಕ್ಷ. ಎಚ್ಚರಿಕೆ ನೀಡಿದರು.
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದ ಕೈಗಾರಿಕಾಭಿವೃದ್ಧಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು. ಕೈಗಾರಿಕಾ ಕ್ಷಮತೆ ಹೆಚ್ಚಿಸಲು ರಾಜ್ಯದ ಲ್ಲಿನ ಸರ್ಕಾರಿ ಐಟಿಐ ಗಳನ್ನು 4300 ಕೋಟಿ ರೂ. ವೆಚ್ಚದಲ್ಲಿ ಟಾಟಾ ಟೆಕ್ನಾಲಜೀಸ್ ಸಹಯೋಗ ದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.
ಮಾಚೇನಹಳ್ಳಿಯಲ್ಲಿರುವ ಖೋಡೇಸ್ ಕಾರ್ಖಾನೆ ಮುಚ್ಚಿದ್ದು, ಇದರ 140 ಎಕರೆ ಭೂಮಿಯನ್ನು ವಾಪಸ್ ಪಡೆಯುವ ಬಗ್ಗೆ ಅದರ ಮಾಲೀಕರನ್ನು ಕರೆಸಿ ಮಾತನಾಡುತ್ತೇನೆ ಎಂದು ಹೇಳಿದರು. ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್, ಎಸ್.ರುದ್ರೇಗೌಡ, ಭಾರತಿ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಚೇನಹಳ್ಳಿ ಕೈಗಾರಿಕಾ ವಲಯದ ಉದ್ಯಮಿಗಳು ಮತ್ತು ಕಾರ್ಮಿಕರ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ 70 ಲಕ್ಷ ರೂ.ಗಳ ದೇಣಿಗೆ ಯನ್ನು ಸಿಎಂ ಮೂಲಕ ಸಲ್ಲಿಸಲಾಯಿತು.
0 التعليقات: