Friday, 5 February 2021

"ರೈತರಿಗೆ ಉತ್ತಮವಾದುದನ್ನೇ ಮಾಡಬೇಕು": ಹೇಳಿಕೆ ನೀಡಿದ ನಟ ಸಲ್ಮಾನ್‌ ಖಾನ್‌

 

"ರೈತರಿಗೆ ಉತ್ತಮವಾದುದನ್ನೇ ಮಾಡಬೇಕು": ಹೇಳಿಕೆ ನೀಡಿದ ನಟ ಸಲ್ಮಾನ್‌ ಖಾನ್‌

ಹೊಸದಿಲ್ಲಿ: ಪ್ರತಿಭಟನಾ ನಿರತ ರೈತರ ಕುರಿತು ಹಲವಾರು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಟ್ವೀಟ್‌ ಮೂಲಕ ಬೆಂಬಲ ಸೂಚಿಸಿದ್ದು, ಇದರ ಬೆನ್ನಲ್ಲೇ ಹಲವಾರು ಭಾರತೀಯ ಸೆಲೆಬ್ರಿಟಿಗಳು ಕೇಂದ್ರ ಸರಕಾರದ ಪರ ಟ್ವೀಟ್‌ ಮಾಡಿದ್ದರು. ಇದೀಗ ರೈತರ ಪ್ರತಿಭಟನೆಯ ಕುರಿತು ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮಾತನಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ರೈತರ ಪ್ರತಿಭಟನೆಯ ಕುರಿತು ತಮ್ಮ ಅಭಿಪ್ರಾಯವೇನೆಂದು ಪ್ರಶ್ನಿಸಿದಾಗ, "ರೈತರಿಗೆ ಸರಿಯಾದದ್ದನ್ನೇ ಮಾಡಬೇಕು, ಸಮರ್ಪಕ ಮತ್ತು ಉತ್ತಮವಾದುದನ್ನೇ ಮಾಡಬೇಕು. ಪ್ರತಿಯೊಬ್ಬ ರೈತನಿಗೂ ಸರಿಯಾದುದನ್ನೇ ಮಾಡಬೇಕು" ಎಂದು ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರಕಾರದ ಪರ ಮಾತನಾಡಿದ್ದ ಅಕ್ಷಯ್‌ ಕುಮಾರ್‌, ಅಜಯ್‌ ದೇವಗನ್‌, ಸಚಿನ್‌ ತೆಂಡೂಲ್ಕರ್‌ ಮತ್ತು ಅನಿಲ್‌ ಕುಂಬ್ಳೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. 


SHARE THIS

Author:

0 التعليقات: