Wednesday, 24 February 2021

ಹಾಸನ: ಪತ್ನಿ-ಮಗಳಿಗಾಗಿ ೧೫ ನಿಮಿಷ ಹೋರಾಡಿ ಚಿರತೆ ಕೊಂದ!


ಹಾಸನ: ಪತ್ನಿ-ಮಗಳಿಗಾಗಿ ೧೫ ನಿಮಿಷ ಹೋರಾಡಿ ಚಿರತೆ ಕೊಂದ!

ಸಂಬಂಧಿಕರ ಮದುವೆಯಿಂದ ಬೈಕ್ ನಲ್ಲಿ ಹೆಂಡತಿ ಮಕ್ಕಳೊಂದಿಗೆ ಬರುತ್ತಿದ್ದ ಎರಗಿದ ಚಿರತೆ ಜೊತೆ ಸುಮಾರು ೧೫ ನಿಮಿಷ ಹೋರಾಡಿದ ವ್ಯಕ್ತಿಯೊಬ್ಬರು ಚಿರತೆಯನ್ನು ಕೊಂದು ಆಸ್ಪತ್ರೆಗೆ ದಾಖಲಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಅರಸೀಕೆರೆ ತಾಲೂಕಿನ ಬೆಂಡೆಕೆರೆ ತಾಂಡ್ಯದ ಸಮೀಪ ಈ ಘಟನೆ ನಡೆದಿದ್ದು, ರಾಜಗೋಪಾಲ್ ಎಂಬುವರು ೧೮ ತಿಂಗಳ ಹೆಚ್ಚು ಚಿರತೆಯನ್ನು ಕೊಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿಕ್ಕಸಿಕ್ಕಲ್ಲಿ ಓಡಾಡುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟಿದ್ದರು. ಈ ಚಿರತೆಗೆ ಅರವಳಿಕೆ ಚುಚ್ಚುಮದ್ದು ಹಾಕಿದರೂ ಅದು ಸರಿಯಾಗಿ ತಗುಲದೇ ಪರಾರಿಯಾಗಿತ್ತು. ಅರಣ್ಯ ಸಿಬ್ಬಂದಿ ಚಿರತೆಯನ್ನು ಹಿಂಬಾಲಿಸಿಕೊಂಡು ಹೋದಾಗ ಚಿರತೆ ವೈದ್ಯ ಡಾ. ಮುರುಳಿ ಅವರ ಮೇಲೇರಗಿ ಗಾಯಗೊಳಿಸಿತ್ತು.

ನಂತರ ಬೈಕ್ ನಲ್ಲಿ ಬರುತ್ತಿದ್ದ ರಾಜಗೋಪಾಲ್ ಅವರ ಚಿರತೆ ಕಣ್ಣು ಬಿದ್ದಿದ್ದು, ಬೈಕ್ ಹಿಂದೆ ಕೂತಿದ್ದ ಪತ್ನಿ ಹಾಗೂ ಮಕ್ಕಳ ಮೇಲೆ ಚಿರತೆ ದಾಳಿ ಮಾಡಿತು. ಕೂಡಲೇ ಸಮಯಪ್ರಜ್ಞೆ ಹಾಗೂ ಸಾಹಸ ಮೆರೆದ ರಾಜಗೋಪಾಲ್, ಚಿರತೆ ಮೇಲೆ ಹಾರಿ ಹಿಂಬದಿಯಿಂದ ಅದರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು. ಸುಮಾರು ೧೫ ನಿಮಿಷ ನಡೆದ ಹೋರಾಟದಲ್ಲಿ ಕೊನೆಗೂ ಚಿರತೆ ಸತ್ತುಬಿದ್ದಿತು.



SHARE THIS

Author:

0 التعليقات: