Sunday, 7 February 2021

ಕಾಸರಗೋಡು : ಲಾರಿ-ಕಾರು ಢಿಕ್ಕಿ ; ಓರ್ವ ಮೃತ್ಯು, ಮೂವರಿಗೆ ಗಾಯ


 ಕಾಸರಗೋಡು : ಲಾರಿ-ಕಾರು ಢಿಕ್ಕಿ ; ಓರ್ವ ಮೃತ್ಯು, ಮೂವರಿಗೆ ಗಾಯ

ಕಾಸರಗೋಡು : ಕಾರು  ಮತ್ತು ಲಾರಿ ನಡುವೆ ಉಂಟಾದ  ಅಪಘಾತದಲ್ಲಿ ಓರ್ವ ಮೃತಪಟ್ಟು,  ಮೂವರು ಗಾಯಗೊಂಡ ಘಟನೆ ಬಂದ್ಯೋಡು ಮುಟ್ಟಂ ಎಂಬಲ್ಲಿ  ಸೋಮವಾರ ನಡೆದಿದೆ.

ಮೃತರನ್ನು ಮುಟ್ಟಂ ಸೈದಾಲಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸೈದಾಲಿ ಅವರ ಮಗನ ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


SHARE THIS

Author:

0 التعليقات: