Thursday, 4 February 2021

ರೈತ ಹೋರಾಟಕ್ಕೆ ಬೆಂಬಲ ನಿರಂತರ: ಟ್ವಿಟ್ಟರ್‌ನಲ್ಲಿ ಮತ್ತೆ ಕಿಚ್ಚು ಹಚ್ಚಿದ ಗ್ರೆಟಾ ಥನ್‌ಬರ್ಗ್‌..!


ರೈತ ಹೋರಾಟಕ್ಕೆ ಬೆಂಬಲ ನಿರಂತರ: ಟ್ವಿಟ್ಟರ್‌ನಲ್ಲಿ ಮತ್ತೆ ಕಿಚ್ಚು ಹಚ್ಚಿದ ಗ್ರೆಟಾ ಥನ್‌ಬರ್ಗ್‌..!

ರೈತ ಪ್ರತಿಭಟನೆ ಪರ ಧ್ವನಿ ಎತ್ತಿದ್ದ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್, ಮತ್ತೆ ಟ್ವೀಟ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಗ್ರೆಟಾ ಟ್ವೀಟ್‌ಗೆ ಭಾರೀ ಪ್ರಮಾಣದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ರೈತ ಹೋರಾಟಕ್ಕೆ ಬೆಂಬಲ ನಿರಂತರ: ಟ್ವಿಟ್ಟರ್‌ನಲ್ಲಿ ಮತ್ತೆ ಕಿಚ್ಚು ಹಚ್ಚಿದ ಗ್ರೆಟಾ ಥನ್‌ಬರ್ಗ್‌..!

ಅಮೆರಿಕ: ಭಾರತದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದ ಪರ ದನಿ ಎತ್ತಿ ವಿಶ್ವದ ಗಮನ ಸೆಳೆದಿದ್ದ ಸಮಾಜಿಕ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ ಮತ್ತೆ ಸುದ್ದಿಯಲ್ಲಿದ್ದಾರೆ..!

ರೈತರ ಶಾಂತಿಯುತ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದಿರುವ ಗ್ರೆಟಾ, ನಾನು ಈಗಲೂ ರೈತರ ಜೊತೆಗೆ ಇದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಎಷ್ಟೇ ದ್ವೇಷಪೂರಿತ ಸಂದೇಶಗಳು ರವಾನೆಯಾಗಲಿ, ಎಷ್ಟೇ ಬೆದರಿಕೆಗಳು ಬರಲಿ, ಮಾನವ ಹಕ್ಕುಗಳ ಉಲ್ಲಂಘನೆಯಾಗಲಿ ನಾನು ಎಂದಿಗೂ ನನ್ನ ನಿಲುವನ್ನು ಬದಲಾವಣೆ ಮಾಡಿಕೊಳ್ಳೋದಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಸ್ಪಷ್ಟಪಡಿಸಿರುವ ಗ್ರೆಟಾ ಥನ್‌ಬರ್ಗ್‌, #FarmersProtest ಎಂಬ ಹ್ಯಾಷ್‌ ಟ್ಯಾಗ್ ಅಡಿ ತಮ್ಮ ಟ್ವೀಟ್ ಹರಿಬಿಟ್ಟಿದ್ದಾರೆ. ಜೊತೆಯಲ್ಲೇ #StandWithFarmers ಎಂಬ ಹ್ಯಾಷ್‌ ಟ್ಯಾಗನ್ನೂ ತಮ್ಮ ಟ್ವೀಟ್‌ನಲ್ಲಿ ನಮೂದಿಸಿದ್ದಾರೆ.

ಗ್ರೆಟಾ ಥನ್‌ಬರ್ಗ್ ಅವರು ನಮೂದಿಸಿರುವ ಹ್ಯಾಷ್‌ ಟ್ಯಾಗ್‌ಗಳು ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್ ಆಗುತ್ತಿವೆ. ಗ್ರೆಟಾ ಅವರ ಟ್ವಿಟ್ಟರ್ ಖಾತೆಗೆ ಪರ-ವಿರೋಧ ಸಂದೇಶಗಳ ಮಹಾಪೂರವೇ ಹರಿದು ಬರ್ತಿದೆ.

400ಕ್ಕೂ ಹೆಚ್ಚು ಪೊಲೀಸರು ಜನವರಿ 26ರಂದು ಗಾಯಗೊಂಡರು, ರಾಷ್ಟ್ರಧ್ವಜವನ್ನು ಕಿತ್ತೆಸೆಯಲಾಯ್ತು ಇದು ಶಾಂತಿಯುತ ಪ್ರತಿಭಟನೆಯೇ ಎಂದು ಕೆಲವರು ಗ್ರೆಟಾಗೆ ತಿರುಗೇಟು ನೀಡಿದ್ಧಾರೆ. ಅಷ್ಟೇ ಅಲ್ಲ #GretaThunbergExposed ಎಂಬ ಹ್ಯಾಷ್ ಟ್ಯಾಗ್‌ ಕೂಡಾ ಟ್ರೆಂಡ್ ಆಗುತ್ತಿದೆ.SHARE THIS

Author:

0 التعليقات: