Monday, 1 February 2021

ಮ್ಯಾನ್ಮಾರ್ | ಸೇನೆಯಿಂದ ಸೂ ಕಿ ಬಂಧನ; ಸೇನಾ ಕ್ಷಿಪ್ರ ಕ್ರಾಂತಿ?


ಮ್ಯಾನ್ಮಾರ್ | ಸೇನೆಯಿಂದ ಸೂ ಕಿ ಬಂಧನ; ಸೇನಾ ಕ್ಷಿಪ್ರ ಕ್ರಾಂತಿ?

ಯಂಗೂನ್ : ಮ್ಯಾನ್ಮಾರ್ ರಾಜಕೀಯ ಕ್ಷೇತ್ರದ ವಿವಾದಾಸ್ಪದ ನಾಯಕಿ ಆಂಗ್ ಸಾನ್ ಸೂ ಕಿ ಅವರನ್ನು ಅಲ್ಲಿನ ಸೇನೆ ಬಂಧಿಸಿರುವ ಬಗ್ಗೆ ವರದಿಯಾಗಿದೆ.

“ಪಕ್ಷದ ಅಧ್ಯಕ್ಷೆ ಮತ್ತು ಸ್ಟೇಟ್ ಕೌನ್ಸಿಲರ್ (ಸೂ ಕಿ) ಅವರನ್ನು ನೈಪಿಡೌನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಅವರನ್ನು ಸೇನಾಧಿಕಾರಿಗಳು ಕರೆದೊಯ್ದಿದ್ದಾರೆ” ಎಂದು ಆಡಳಿತಾರೂಢ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯ ವಕ್ತಾರ ಮಿಯೊ ನ್ಯೂಂಟ್ ಹೇಳಿದ್ದಾರೆ.

“ಇದೀಗ ಕಂಡುರುತ್ತಿರುವ ಪರಿಸ್ಥಿತಿಯನ್ನು ನೋಡಿದರೆ, ಮ್ಯಾನ್ಮಾರ್ ಸೇನೆ ಕ್ಷಿಪ್ರ ಕ್ರಾಂತಿಗೆ ಮುಂದಾಗಿದೆ ಎಂದು ಭಾವಿಸಬೇಕಾಗುತ್ತದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಸಿದ್ಧತೆ ಬಳಿಕ ಸೇನೆ ಈ ಕಾರ್ಯಾಚರಣೆ ನಡೆಸಿದೆ.SHARE THIS

Author:

0 التعليقات: