Sunday, 21 February 2021

ಜನರಿಗೆ ಮುಖ ಗುರುತು ಸಿಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಗಡ್ಡ ಬೆಳೆಸಿದ್ದಾರೆ": ಸಿದ್ದರಾಮಯ್ಯ ವ್ಯಂಗ್ಯ


 ಜನರಿಗೆ ಮುಖ ಗುರುತು ಸಿಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಗಡ್ಡ ಬೆಳೆಸಿದ್ದಾರೆ": ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು: ದಿನಬಳಕೆಯ ವಸ್ತುಗಳ ಬೆಲೆಯು ಗಗನಕ್ಕೇರಿರುವ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. "ದಿನಬಳಕೆಯ ಅಗತ್ಯ ವಸ್ತುಗಳ ದರವು ದಿನ ಕಳೆದಂತೇ ಹೆಚ್ಚುತ್ತಿದೆ. ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಜನರಿಗೆ ಮುಖ ಗುರುತು ಸಿಗಬಾರದು ಎಂಬ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಗಡ್ಡ ಬೆಳೆಸಿಕೊಂಡಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ. 

ರವಿವಾರ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, "ಸುಳ್ಳಿಗೆ ಪರ್ಯಾಯ ಪದವೇ ನರೇಂದ್ರ ಮೋದಿ. ಅತೀ ಕೆಟ್ಟದಾದ ಸರಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಮೋದಿಯ ಹೆಸರಿನಲ್ಲಿ ಘೋಷಣೆ ಕೂಗುತ್ತಾ ಅವರನ್ನು ಅಧಿಕಾರಕ್ಕೇರಿಸಿದ ಯುವಜನತೆಗೆ ಮೋದಿ ಮೋಸ ಮಾಡಿದ್ದಾರೆ. ಅವರ ಬಣ್ಣವನ್ನು ಕಾಂಗ್ರೆಸ್ ಪಕ್ಷವು ಬಯಲು ಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


SHARE THIS

Author:

0 التعليقات: