Wednesday, 3 February 2021

ತಡರಾತ್ರಿ ವಿಧಾನಸೌಧದ ಕಚೇರಿಯಲ್ಲಿ ಹೋಮ-ಹವನ ಮಾಡಿಸಿದ ಸಚಿವ ಎಸ್.ಅಂಗಾರ

 

ತಡರಾತ್ರಿ ವಿಧಾನಸೌಧದ ಕಚೇರಿಯಲ್ಲಿ ಹೋಮ-ಹವನ ಮಾಡಿಸಿದ ಸಚಿವ ಎಸ್.ಅಂಗಾರ

ಬೆಂಗಳೂರು: ಇತ್ತೀಚೆಗಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಳ್ಯ ಶಾಸಕ ಎಸ್.ಅಂಗಾರ ಅವರು ವಿಧಾನ ಸೌಧದ ಕಚೇರಿಯಲ್ಲಿ ಹೋಮ ಹವನ, ಪೂಜಾ ಕಾರ್ಯ ನೆರವೇರಿಸಿದರು.

ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಎಸ್‌. ಅಂಗಾರ ಅವರು ತಡರಾತ್ರಿ ನೂತನ ಕಚೇರಿಯಲ್ಲಿ ಹೋಮ ನಡೆಸಿದ್ದರು. ನಾಲ್ವರು ಅರ್ಚಕರಿಂದ ಹೋಮ, ಹವನ ನಡೆದಿತ್ತು. ವಾಸ್ತು ಹೋಮ ಹಾಗೂ ಗಣ ಹೋಮ‌ ನಡೆಸಿದ್ದರು.

ಇಂದು ಬೆಳಿಗ್ಗೆ ಕಚೇರಿಯಲ್ಲಿ ಪೂಜಾಕಾರ್ಯ ನೆರವೇರಿಸಿದರು. ವಿಧಾನಸೌಧ ಕಚೇರಿಯಲ್ಲಿ (252 ಹಾಗೂ 253A) ಪೂಜಾ ವಿಧಿ-ವಿಧಾನಗಳನ್ನು ನಡೆಸಿ ಆಶೀರ್ವಾದ ಕೋರಲಾಯಿತು. ನಾಡಿನ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ನಿಮ್ಮೆಲ್ಲರ ಶುಭಶೀರ್ವಾದ, ಭಗವಂತನ ಕೃಪೆ ಇರಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಎಸ್. ಅಂಗಾರ ಹೇಳಿಕೊಂಡಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎಸ್.ಅಂಗಾರ ಅವರ ಕಚೇರಿ ಪೂಜೆಗೆ ಆಗಮಿಸಿದ್ದರು. ಕಚೇರಿ ಪೂಜೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಸ್ ಅಂಗಾರ ಭಾವುಕರಾದರು. ನನಗೆ ದೇವರ ಮೇಲೆ ನಂಬಿಕೆಯಿದೆ. ದೇವರ ಅನುಗ್ರಹ ಬೇಕು. ಹಾಗಾಗಿಯೇ ಹೋಮ ಮಾಡಿಸಿದೆ ಎಂದು ಅವರು ಹೇಳಿದರು.


SHARE THIS

Author:

0 التعليقات: