Wednesday, 24 February 2021

ನಾಳೆ, ನಚ್ಚಬೆಟ್ಟು ದಾರುಲ್ ಮುಸ್ತಫಾ ಸನದುದಾನ ಮಹಾ ಸಮ್ಮೇಳನಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ


  ನಾಳೆ, ನಚ್ಚಬೆಟ್ಟು ದಾರುಲ್ ಮುಸ್ತಫಾ ಸನದುದಾನ ಮಹಾ ಸಮ್ಮೇಳನಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ 

ಮಾಣಿ : ಇಲ್ಲಿನ ಗಡಿಯಾರ ಸಮೀಪ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರ ಸಾರಥ್ಯದಲ್ಲಿ ನಡೆಯುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ಇದರ ಪ್ರಥಮ ಸನದುದಾನ ಮಹಾ ಸಮ್ಮೇಳನ ಸುಲ್ತಾನಿ ಮತ್ತು ಅಲ್ ಫುರ್ಖಾನಿ ಪದವಿ ಪ್ರಧಾನ ಸಮಾರಂಭ ನಡೆಯಲಿದ್ದು.

ನಾಳೆ ನಡೆಯಲಿರುವ ಸನದುದಾನ ಮಹಾಸಮ್ಮೇಳನಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ. ನಾಳೆ ಸಂಜೆ 4:30 ಕ್ಕೆ ಸರಿಯಾಗಿ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ತಲುಪಲಿದ್ದಾರೆ ಎಂದು ತಿಳಿದು ಬಂದಿದೆ.ಫೆಬ್ರವರಿ 23 ರಂದು ಕಾರ್ಯಕ್ರಮ ಪ್ರಾರಂಭಗೂಂಡಿದೆ. 

ಕಾರ್ಯಕ್ರಮದಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್,ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರ್ ತಂಙಳ್, ಸಯ್ಯಿದ್ ತ್ವಾಹಾ ತಂಙಳ್,ರಫೀಕ್ ಸಅದಿ ದೇಲಂಪಾಡಿ,ಡಾ.ಅಬ್ದುರ್ರಶೀದ್ ಝೈನಿ,ಮುಂತಾದ ಹಲವಾರು ಉಲಮಾ ಉಮರಾ ನಾಯಕರುಗಳು ಭಾಗವಹಿಸಲಿರುವರು ಎಂದು ತಿಳಿದು ಬಂದಿದೆ.SHARE THIS

Author:

0 التعليقات: