Friday, 12 February 2021

ರಾಜ್ಯಸಭೆಗೆ ರಾಜೀನಾಮೆ ನೀಡಿದ ತೃಣಮೂಲ ಕಾಂಗ್ರೆಸ್‌ ಮುಖಂಡ ದಿನೇಶ್‌ ಚತುರ್ವೇದಿ

 

ರಾಜ್ಯಸಭೆಗೆ ರಾಜೀನಾಮೆ ನೀಡಿದ ತೃಣಮೂಲ ಕಾಂಗ್ರೆಸ್‌ ಮುಖಂಡ ದಿನೇಶ್‌ ಚತುರ್ವೇದಿ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಮುಖಂಡ ದಿನೇಶ್ ತ್ರಿವೇದಿ ಅವರು ಇಂದು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಂಸತ್ತಿನಲ್ಲಿ ಘೋಷಿಸಿದ್ದು, ಮೇ ವೇಳೆಗೆ ನಡೆಯಲಿರುವ ಬಂಗಾಳ ಚುನಾವಣೆಗೆ ಮುನ್ನ ನಾಟಕೀಯ ನಿರ್ಗಮನಗೈದ ನಾಯಕರ ಪಾಲಿಗೆ ಅವರೂ ಸೇರ್ಪಡೆಗೊಂಡಿದ್ದಾರೆ. ತಮ್ಮ ರಾಜ್ಯದ ರಾಜಕೀಯ ಹಿಂಸಾಚಾರದ ಬಗ್ಗೆ ಬೇಸತ್ತ ಕಾರಣ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾಗಿ Ndtv.com ವರದಿ ಮಾಡಿದೆ.

"ಬಂಗಾಳದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ಕಾರಣದಿಂದಾಗಿ ನಾನು ಇಲ್ಲಿ ಆಸೀನನಾಗಿರುವುದು ತುಂಬಾ ವಿಚಿತ್ರವೆನಿಸುತ್ತದೆ" ಎಂದು ತ್ರಿವೇದಿ ರಾಜ್ಯಸಭೆಯಲ್ಲಿ ಹೇಳಿದರು.

"ನಮ್ಮ ಮಾತೃಭೂಮಿಗೋಸ್ಕರ ನಾವು ಇಲ್ಲಿದ್ದೇವೆ, ನಾನೂ ಇದ್ದೇನೆ. ನನ್ನನ್ನು ಇಲ್ಲಿಗೆ ಕಳುಹಿಸಿದ್ದಕ್ಕಾಗಿ ನನ್ನ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ" ಎಂದು ಅವರು ಹೇಳಿದರು. "ನಾನು ನನ್ನ ರಾಜ್ಯಕ್ಕೆ ಹಿಂತಿರುಗಿ ರಾಜ್ಯಕ್ಕಾಗಿ ಕೆಲಸ ಮಾಡಲು ಬಯಸಿದ್ದೇನೆ ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.


SHARE THIS

Author:

0 التعليقات: