Saturday, 13 February 2021

ಹಣ್ಣಿನಂಗಡಿಯಲ್ಲಿಯೇ ಸುಟ್ಟು ಕರಕಲಾದ ಯುವಕ


 ಹಣ್ಣಿನಂಗಡಿಯಲ್ಲಿಯೇ ಸುಟ್ಟು ಕರಕಲಾದ ಯುವಕ

ಕೊಪ್ಪಳ: ಹಣ್ಣಿನಂಗಡಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಯುವಕನೊಬ್ಬ ಸಜೀವ ದಹನಗೊಂಡ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

18 ವರ್ಷದ ವೀರೇಶ್ ಮುಂಡರಗಿ ಮೃತ ಯುವಕ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಣ್ಣಿನಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಂಗಡಿಯಲ್ಲಿಯೇ ಮಲಗಿದ್ದ ವೀರೇಶ್, ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾನೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


SHARE THIS

Author:

0 التعليقات: