Monday, 1 February 2021

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ರೈತರೊಡನೆ ಚರ್ಚೆಗೆ ಸರ್ಕಾರ ಸದಾ ಸಿದ್ಧ


ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ರೈತರೊಡನೆ ಚರ್ಚೆಗೆ ಸರ್ಕಾರ ಸದಾ ಸಿದ್ಧ


ನವದೆಹಲಿ: ತೀವ್ರ ವಿರೋಧ ಎದುರಿಸುತ್ತಿರುವ ಮೂರು ಕೃಷಿ ಕಾಯ್ದೆಗಳ ಕುರಿತು ರೈತರೊಡನೆ ಚರ್ಚೆಗೆ ಸರ್ಕಾರ ಮುಕ್ತವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.


ಇಂದು ಬಜೆಟ್ ಮಂಡನೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವೆ, ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ನಡೆಯುತ್ತಿರುವ ಅಸ್ತವ್ಯಸ್ತತೆಗೆ ಏಕೈಕ ಪರಿಹಾರವೆಂದರೆ 'ಚರ್ಚೆ' ಮತ್ತು ಮೂರು ಕೃಷಿ ಕಾನೂನುಗಳ ಪ್ರತಿಯೊಂದು ನಿಬಂಧನೆಗಳ ಬಗ್ಗೆ ರೈತರೊಂದಿಗೆ ಸಮಾಲೋಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.


''ಕೃಷಿ ಕಾನೂನುಗಳ ಪ್ರಕಾರ, ಸರ್ಕಾರವು ರೈತರೊಂದಿಗೆ ಮಾತುಕತೆಗೆ ಯಾವಾಗಲೂ ಮುಕ್ತವಾಗಿದೆ; ಚರ್ಚೆಗೆ ಕೃಷಿ ಸಚಿವರು ಸಿದ್ಧರಾಗಿದ್ದಾರೆ. ಆದ್ದರಿಂದ, ಸಂಭಾಷಣೆಯೇ ಮುಂದಿನ ದಾರಿ ಎಂದು ನಾವು ನಂಬುತ್ತೇವೆ.'' ಎಂದಿದ್ದಾರೆ.

ಬಜೆಟ್ ನ ಎರಡು ಪ್ರಮುಖ ಲಕ್ಷಣಗಳ ಬಗ್ಗೆ ಹೇಳಿದ ಸಚಿವೆ, ''ನಾವು ವಿವಿಧ ಕ್ಷೇತ್ರಗಳಲ್ಲಿನ ಮೂಲ ಸೌಕರ್ಯಕ್ಕಾಗಿ ಆದ್ಯತೆ ನೀಡಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿನ ಸಾಮರ್ಥ್ಯ ವೃದ್ಧಿಗೆ ಮಹತ್ವದ ಗಮನ ಹರಿಸಲಾಗಿದ್ದು, ಇದಕ್ಕಾಗಿ ಬಹುದೊಡ್ಡ ಮೊತ್ತ ಮೀಸಲಿಡಲಾಗಿದೆ. ಬ್ಲಾಕ್ ಮಟ್ಟದ ಅವಶ್ಯಕತೆಗಳ ಯೋಜನೆಗೆ ಗಮನಹರಿಸಲಾಗಿದೆ. ಕೃಷಿಗೆ ಒತ್ತು ನೀಡಲಾಗಿದ್ದು, ನಬಾರ್ಡ್ ಮೂಲಕ ಸಾಲದ ಹರಿವಿನ ಹಂಚಿಕೆ ಹೆಚ್ಚಾಗಿದೆ. ಅಂತೆಯೇ ವಿಮಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.SHARE THIS

Author:

0 التعليقات: