ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶುರುವಾಗದ ಶಾಲೆ, 'ಐಸ್ಕ್ಯಾಂಡಿ, ತರಕಾರಿ, ಕೂಲಿ ಕೆಲಸ'ದತ್ತ ಮುಖ ಮಾಡಿದ ಮಕ್ಕಳು
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗದ ಹಿನ್ನಲೆಯಲ್ಲಿ ಮಕ್ಕಳು ತರಕಾರಿ, ಐಸ್ಕ್ಯಾಂಡಿ ಸೇರಿದಂತೆ ನಾನಾ ಕೆಲಸಗಳತ್ತು ಮುಖ ಮಾಡಿದ್ದು, ಮನೆಯಲ್ಲಿರುವ ತಂದೆ-ತಾಯಿಗಳು ಕೂಡ ಇದಕ್ಕೆ ಸಾಥ್ ನೀಡುತ್ತಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಸಿಕ್ಕಿದೆ. ಶಾಲೆ ಆರಂಭಿಸದಿದ್ದಲ್ಲಿ ಬಾಲ ಕಾರ್ಮಿಕತೆ ಸೇರಿದಂತೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಶಾಲೆಯನ್ನು ಎಲ್ಲಾ ಕ್ಲಾಸ್ನ ಮಕ್ಕಳಿಗೆ ಶಾಲೆ ಶುರು ಮಾಡಿದ್ರೆ, ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡೋದು ತಪ್ಪುತ್ತದೆ.
ಶಾಲೆ ಇಲ್ಲದ ಕಾರಣ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಸಾಧ್ಯವಾಗದ ಪೋಷಕರು ಅವರನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳು ಸಣ್ಣ ಪುಟ್ಟ ಕೆಲಸ ಮಾಡಿ ಮನೆಗೆ ಹಣವನ್ನು ನೀಡುತ್ತಾರೆ. ಇದರಿಂದ ಪೋಷಕರು ಕೂಡ ಸಂತಸದಿಂದ ಇದ್ದು, ಶಾಲೆ ಶುರುವಾಗೋದೇ ಬೇಡ ಮಕ್ಕಳನ್ನು ಓದಿಸೋದೇ ಬೇಡ ಅನ್ನೋ ನಿರ್ಧಾರಕ್ಕೆ ಬಂದರೂ ಕೂಡ ಅಚ್ಚರಿ ಪಡಬೇಕಾಗಿಲ್ಲ. ಅಂದ ಹಾಗೇ ಕಾರ್ಮಿಕ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಕೋವಿಡ್ ಕಾಲಾವಧಿಯಲ್ಲಿ ರಾಜ್ಯದಲ್ಲಿ ಒಟ್ಟು 4549 ಕಡೆಗಳಲ್ಲಿ ಇಲಾಖೆ ತಪಾಸಣೆ ನಡೆಸಿದೆ. ಈ ವೇಳೆ 73 ಪ್ರಕರಣಗಳು ಪತ್ತೆಯಾಗಿದ್ದು 63 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
0 التعليقات: