Friday, 26 February 2021

ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ತೆರೆಯಲು ಅನುಮೋದನೆ


 ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ತೆರೆಯಲು ಅನುಮೋದನೆ

ಚಿಂಚೋಳಿ: ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ಕಲಬುರ್ಗಿಯಲ್ಲಿ ಮುಂದಿನ ವರ್ಷ ತೆರೆಯಲಾಗುವುದು ಇದಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರಕಿದೆ ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ತಿಳಿಸಿದರು.

ಅವರು ತಾಲ್ಲೂಕಿನ ಸುಲೇಪೇಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಪತ್ರಾಗಾರ ಇಲಾಖೆಯ ಆಶ್ರಯದಲ್ಲಿ ಶುಕ್ರವಾರ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ( ಹೈಕ) ಭಾಗದ ಚರಿತ್ರೆಯ ದಾಖಲೆಗಳು ಈ ಭಾಗದಲ್ಲಿ ನಡೆದ ಸೇನಾ ಕಾರ್ಯಾಚರಣೆಯಿಂದ ದಾಖಲೆಗಳು ದೆಹಲಿ, ಪುಣೆ ಮತ್ತು ಹೈದರಾಬಾದ್‌ಗೆ ಕೊಂಡೊಯ್ಯಲಾಗಿದೆ. ಇವುಗಳನ್ನು ವಾಪಸ್ ತರಲು ವಿಭಾಗೀಯ ಕಚೇರಿ ನೆರವಾಗಲಿದೆ ಎಂದರು.
SHARE THIS

Author:

0 التعليقات: